ಬೆಳಗಾವಿಯಲ್ಲಿ ನಡೆಯುವ ಆಜಾದಿ ಅಮೃತ ‌ಮಹೋತ್ಸವ ಗಮನ ಸೆಳೆಯಬೇಕು: ನವೀನ

ಬೆಳಗಾವಿ: ಸ್ವಾತಂತ್ರ್ಯ ಹೊರಾಟದಲ್ಲಿ ದೇಶದ ಗಮನ ಸೇಳೆದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರ ಕರ್ಮ ಭೂಮಿ ಬೆಳಗಾವಿಯಲ್ಲಿ ನಡೆಯುವ ಆಜಾದಿ ಅಮೃತ ಮಹೊತ್ಸವ ಕಾರ್ಯಕ್ರಮ ರಾಷ್ಟ್ರ ಮಟ್ಟದಲ್ಲಿ ನೋಡುವ ಮಟ್ಟಕ್ಕೆ ಆಯೋಜನೆ ಮಾಡಬೇಕೆಂದು

promotions

ರಾಜ್ಯ ಪ್ರಧಾನ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯ ತಿರಂಗಾ ಅಭಿಯಾನ ರಾಜ್ಯ ಸಂಚಾಲಕ ಕೆ.ಎಸ್.ನವೀನ ಹೇಳಿದರು.

promotions

ಮಹಾನಗರದ ಗೊಮಟೆಶ್ವರ ಸಭಾಭವನದಲ್ಲಿ ಶುಕ್ರವಾರ ನಡೆದ ಹರ ಘರ ತಿರಂಗಾ ಅಭಿಯಾನದ ವಿಶೇಷ ಸಭೆಯಲ್ಲಿ ಮಾತನಾಡಿ, ದೇಶದ 20 ಕೋಟಿಗಿಂತ ಹೆಚ್ಚಿನ ಮನೆಗಳ ಮೇಲೆ ತಿರಂಗಾ ಹಾರುವ ಮೂಲಕ ಪ್ರಪಂಚದಲ್ಲಿ ದೇಶ ಭಕ್ತಿಗೆ ಭಾರತ ಮುನ್ನುಡಿ ಬರೆಯಲಿದೆ ಎಂದರು.

75 ನೆ ವರ್ಷದ ಸ್ವಾತಂತ್ರ್ಯತೋತ್ಸವ ಅಮೃತ ಮಹೊತ್ಸವ ದೇಶದ ಅತಿ ದೊಡ್ಡ ಹಬ್ಬವಾಗಿ ಹೊರಹಮ್ಮಲಿದೆ. ಇ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನ ಸನ್ನದ್ಧಗೊಳಿಸಿ ಪ್ರತಿ ಮನೆಯ ಮೇಲೆ ಧ್ವಜ ಸಂಹಿತೆಯ ಅಡಿಯಲ್ಲಿ ಅ13 ರಿಂದ 15ರ ವರೆಗೆ ತಿರಂಗ ಹಾರಾಡಲು ಶ್ರಮವಹಿಸಲಿದ್ದಾರೆ.

ಬೆಳಗಾವಿ ಜಿಲ್ಲೆಗೆ ಪಕ್ಷದ ವತಿಯಿಂದ ಒಂದು ಲಕ್ಷ ತಿರಂಗಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ತಿರಂಗಾ ಅಭಿಯಾನದಲ್ಲಿ 75ಕೀ ಮೀ ಬೈಕ್ ಗಳ ಮೂಲಕ ಜಾಗೃತಿ ಸೈಕಲ್ ಜಾತಾ, ಮತ್ತು ವಿದ್ಯಾರ್ಥಿಗಳಿಗೆ ಪ್ರಬಂಧ, ರಂಗೋಲಿ ಹಾಗೂ ಭಾಷಣ ಸ್ಪರ್ಧೆ, ಪಂಜಿನ ಮೆರವಣಿಗೆ ಹಮ್ಮಿಕೊಳ್ಳುವ ಮೂಲಕ ದೇಶದ ಜನತೆಯ ಜೋತೆ ತಿರಂಗಾದ ಭಾವನಾತ್ಮಕ ಸಂಬಂಧ ಬೆಸೆಯುವತ್ತ ಬಿಜೆಪಿ ಚಿತ್ತ ಹರಿಸಿದೆ. ಎಂದರು.

ಬರುವ ದಿನಗಳಲ್ಲಿ ಪಕ್ಷ ಹಮ್ಮಿಕೊಳ್ಳಬೇಕಾದ ಸಂಘಟನಾತ್ಮಕ ವಿಷಯಗಳನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು., ಉತ್ತರ ಕ್ಷೆತ್ರದ ಶಾಸಕ ಮಹಾನಗರ ಜಿಲ್ಲಾ ಅಧ್ಯಕ್ಷ ಅನೀಲ ಬೆನಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯ ಮೇಲೆ ರಾಜ್ಯ ವಕ್ತಾರ ಎಮ್.ಬಿ.ಝಿರಲಿ, ಮಾಜಿ ಸಚಿವ ಶಶಿಕಾಂತ ನಾಯಕ, ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಎಮ್.ಸಿ. ರಾಜ್ಯ ಕಾರ್ಯದರ್ಶಿ ಉಜ್ವಲಾ ಭಡವನಾಚೆ, ರಮೇಶ ದೇಶಪಾಂಡೆ, ಬುಡಾ ಅಧ್ಯಕ್ಷ ಸಂಜಯ ಬೆಳಗಾಂವಕರ, ಅರ್.ಎಸ್.ಮುತಾಲಿಕ ಇದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಪಾಟೀಲ, ದಾದಾಗೌಡ ಬಿರಾದಾರ, ಸಂದೀಪ್ ದೇಶಪಾಂಡೆ, ಮುರಘೇಂದ್ರಗೌಡ ಪಾಟೀಲ, ಜಿಲ್ಲಾ ಕೋಶಾಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ.ಎಸ್.ಸಿದ್ದನಗೌಡರ, ಶರದ ಪಾಟೀಲ, ಶಶಿಕಾಂತ ಪಾಟೀಲ, ರೇಖಾ ಚಿನ್ನಾಕಟ್ಟಿ, ಮಲ್ಲಣ್ಣ ಯಾದವಾಡ, ಈರಣ್ಣ ಚಂದರಗಿ, ಗೀತಾ ಸುತಾರ, ಡಾ.ಬಸವರಾಜ ಪರವಣ್ಣವರ, ರಾಜೇಶ ಬಿಳಗಿ, ಪ್ರಕಾಶ ಬಬಲಿ, ಲಿನಾ ಟೊಪ್ಪನ್ನವರ, ಯಲ್ಲೇಶ ಕೊಲಕಾರ, ಗೀರಿಷ ದೊಂಗಡಿ, ನೀತಿನ ಚೌಗಲೆ, ಸಂತೋಷ ದೇಶನೂರ, ವೀರಭದ್ರ ಪೂಜಾರ, ಬಿ.ಎಫ್.ಕೊಳದೂರ, ಮಹಾಂತೇಶ ವಕ್ಕುಂದ, ಹನಮಂತ ಕೊಂಗಾಲಿ, ಕೆ.ವಿ.ಪಾಟೀಲ, ಪ್ರದೀಪ‌ ಸಾಣಿಕೊಪ್ಪ, ಲಕ್ಕಪ್ಪ ಕಾರ್ಗಿ, ರಾಜಶೇಖರ ಡೋಣಿ,ಜಯತಿರ್ಥ ಸವದತ್ತಿ, ವಿಜಯ ಕೊಡಗನುರ, ವಿನೋದ ಲಂಗೋಟಿ, ವಿನಯಾ ವಿಜಾಪೂರೆ, ಈರಪ್ಪ ಡವಳೇಶ್ವರ, ಶಕೀಲ ಧಾರವಾಡಕರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ ಸ್ವಾಗತಿಸಿದರು, ಸುಭಾಷ ಪಾಟೀಲ ನಿರೂಪಿಸಿದರು.

Read More Articles