ಬೈಲಹೊಂಗಲ ಶಾಸಕರ ವಾಹನ ಅಪಘಾತ
- shivaraj bandigi
- 20 May 2024 , 12:43 PM
- Belagavi
- 560
ಬೈಲಹೊಂಗಲ : ಶಾಸಕ ಮಹಾಂತೇಶ ಕೌಜಲಗಿ ಸಂಚರಿಸುತ್ತಿದ್ದ ಇನ್ನೋವಾ ಕಾರು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಅಪಘಾತವಾಗಿದ್ದು ಶಾಸಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ಶಾಸಕರ ಭವನದಿಂದ ವಿಧಾನಸೌಧದ ಮುಂಭಾಗಕ್ಕೆ ಶಾಸಕರ ಕಾರು ಬರುತ್ತಿದ್ದಂತೆ ಆ ಕಡೆಯಿಂದ ವೇಗವಾಗಿ ಬರುತ್ತಿದ್ದ ಪೋಲೊ ಕಾರ ಶಾಸಕರ ಕಾರಿಗೆ ಗುದ್ದಿದೆ ಇದರಿಂದ ಶಾಸಕರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಶಾಸಕರ ಆಪ್ತವಲಯ ಮಾಹಿತಿ ನೀಡಿದೆ.

ವರದಿ : ರವಿಕಿರಣ್ ಯಾತಗೇರಿ










