ಬೈಲಹೊಂಗಲ ತಾಲೂಕಿಗೆ ಬೇಕು ಜಿಲ್ಲಾ ಸ್ಥಾನಮಾನ

ಬೈಲಹೊಂಗಲ : ಸ್ವಾತಂತ್ರ್ಯ ಪೂರ್ವದಿಂದಲೂ ಉಪವಿಭಾಗವಿರುವ ಬೈಲಹೊಂಗಲ, ಬೆಳಗಾವಿ ಜಿಲ್ಲೆಯ 6 ತಾಲೂಕುಗಳ ಅತಿದೊಡ್ಡ ಉಪವಿಭಾಗ ಕೇಂದ್ರ. 

promotions

ಬೆಳಗಾವಿ ಜಿಲ್ಲೆಯ ಕೂಗು ಎದ್ದಗಲೆಲ್ಲಾ ಬೈಲಹೊಂಗಲ ತಾಲೂಕಿನ ಜನ ಜಿಲ್ಲಾಕೇಂದ್ರಕ್ಕಾಗಿ ಹೋರಾಟ ಆರಂಭಿಸುವದು ತಪ್ಪೆನಿಲ್ಲ. ಇತಿಹಾಸ ಪ್ರಸಿದ್ದಿ ಪಡೆದಿರುವ ಬೈಲಹೊಂಗಲ ತಾಲೂಕು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರ ನಾಡಾಗಿದೆ.

promotions

ಬ್ರಿಟಿಷರ ಗುಂಡೇಟಿಗೆ ಅನೇಕರು ಕೂಡಾ ಬಲಿಯಾಗಿದ್ದಾರೆ. ಭೌಗೋಳಿಕವಾಗಿ, ವಿಸ್ತೀರ್ಣವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲು ಸೂಕ್ತವಾಗಿದೆ. ಭಾರತದಲ್ಲಿಯೇ ಅತಿ ದೊಡ್ಡದಾದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಸರುವಾಸಿಯಾಗಿತ್ತು. ಅಲ್ಲದೆ ಬ್ರಿಟಿಷರ ವಿರುದ್ದ ದಂಗೆ ಎದ್ದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದಿದ್ದು ಇದೇ ಬೈಲಹೊಂಗಲ.

ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಅಮಟೂರು ಬಾಳಪ್ಪ, ದೇಶದಲ್ಲಿಯೇ ಮೊದಲ ಮಹಿಳಾ ಸೈನ್ಯ ಕಟ್ಟಿದ ವೀರವಣಿತೆ ಬೆಳವಡಿಯ ಮಲ್ಲಮ್ಮ ಅವರಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಆಳಿದ ನಾಡು ಇದಾಗಿದೆ. ಬೆಳಗಾವಿ, ಧಾರವಾಡ ಜಿಲ್ಲಾ ಕೇಂದ್ರಗಳಿಗೆ ಅತಿ ಹತ್ತಿರವಿರುವ ತಾಲೂಕು ಕೇಂದ್ರ. ಕೃಷಿ ಪ್ರಧಾನವಾದ ಇಲ್ಲಿ ಎಲ್ಲ ಜಾತಿ ಜನಾಂಗದ ಜನರಿದ್ದು ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ.

ಸಮೀಪದ ಯರಗಟ್ಟಿ, ಸವದತ್ತಿ, ಕಿತ್ತೂರು, ರಾಮದುರ್ಗ ಹಾಗೂ ಬೈಲಹೊಂಗಲ ತಾಲೂಕುಗಳನ್ಬು ಸೇರಿಸಿ ಜಿಲ್ಲಾ ಕೇಂದ್ರವಾದಲ್ಲಿ ತಾಲೂಕು ಅಭಿವೃದ್ಧಿ ಹೊಂದಿ ಹಲವಾರು ಕಾರ್ಖಾನೆಗಳು ಸ್ಥಾಪಿತವಾಗಿ ಉದ್ಯೋಗ ಸೃಷ್ಟಿ ಆಗುವದರಲ್ಲಿ ಸಂಶಯವಿಲ್ಲ. ಸನ್ 1997 ರಲ್ಲಿ ಅಂದಿನ‌ ಮುಖ್ಯಮಂತ್ರಿ ಜೆ.ಹೆಚ್. ಪಟೇಲರು ಜಿಲ್ಲಾ ವಿಭಜನೆಗೆ ಕೈ ಹಾಕಿದಾಗ ಬೈಲಹೊಂಗಲ ಜನ ರೊಚ್ಚಿಗೆದ್ದಿದ್ದರು ಇದನ್ನರಿತ ಅವರು ವಿಭಜನೆ ಕೈಬಿಟ್ಟು ಹೋರಾಟಗಾರಿಗೆ ಲಿಖಿತವಾಗಿ ಭರವಸೆ ನೀಡಿದ್ದರು.

ಅಖಂಡ ಬೆಳಗಾವಿ ಜಿಲ್ಲೆಗೆ ಆಗ್ರಹಿಸುತ್ತಿರುವ ಇಲ್ಲಿನ ಜಿಲ್ಲಾ ಹೋರಾಟಗಾರರ ಬೇಡಿಕೆಯೊಂದೆ ಬೆಳಗಾವಿ ಜಿಲ್ಲೆ ವಿಭಜನೆ ಅನಿವಾರ್ಯವಾದರೆ ಬೈಲಹೊಂಗಲ ಉಪವಿಭಾಗವನ್ನು ಪರಿಗಣಿಸಲು ಸತತ 30 ವರ್ಷಗಳ ನಿರಂತರ ಹೋರಾಟ ನಡೆದಿದೆ. 

ಈಗ ಪ್ರಸ್ತುತ ರಾಜ್ಯ ಸರ್ಕಾರದ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಿಕ್ಲಾ ವಿಭಜನೆಯ ಕೂಗು ಆರಂಭಿಸಿದ್ದು ಎಲ್ಲಿಗೆ ತಲುಪಬಹುದು ಎನ್ನುವದು ಊಹೆಗೂ ನಿಲಕದ್ದು. ಒಟ್ಟಾರೆ ಬೈಲಹೊಂಗಲ ತಾಲೂಕಿನ ಜನ ಅಖಂಡ ಬೆಳಗಾವಿ ಜಿಲ್ಲೆಗೆ ಆಗ್ರಹಿಸುತ್ತಿದ್ದು ಅನಿವಾರ್ಯತೆ ಎದುರಾದರೆ ಬೈಲಹೊಂಗಲ ಜಿಲ್ಲಾ ಕೇಂದ್ರ ಪರಿಗಣಿಸುವಂತೆ ಆಗ್ರಹಿಸುತ್ತಿದ್ದಾರೆ.

ವರದಿಗಾರ : ರವಿಕಿರಣ್ ಯಾತಗೇರಿ

Read More Articles