ಡಾ. ಜಿ ಪರಮೇಶ್ವರವರನ್ನು ಮುಖ್ಯಮಂತ್ರಿ ಮಾಡುವಂತೆ ಬಾಲರಾಜ್ ವಿರುಪಾಪುರ ಮನವಿ

ಕವಿತಾಳ : ಕರ್ನಾಟಕದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವಂತಹ ಡಾ, ಜಿ ಪರಮೇಶ್ವರ್  ಅವರಿಗೆ  ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಅಖಿಲ ಕರ್ನಾಟಕ ಡಾ,ಜಿ ಪರಮೇಶ್ವರ್ ಯುವ ಸೈನ್ಯ (ರಿ) ರಾಯಚೂರು ಜಿಲ್ಲಾ ಅಧ್ಯಕ್ಷರಾದ ಬಾಲರಾಜ್ ವಿರುಪಾಪುರ  ಕೇಂದ್ರ ಎ ಐ ಸಿ ಸಿ  ಅಧ್ಯಕ್ಷರಿಗೆ ಪತ್ರಿಕೆ ಹೇಳಿಕೆ ಮೂಲಕ ಒತ್ತಾಯಿಸಿದರು.

promotions

ಡಾ ಜಿ ಪರಮೇಶ್ವರ್ ಅವರು ಅನೇಕ ಬಾರಿ ಶಾಸಕರಾಗಿ ಅನೇಕ ಬಾರಿ ಸಚಿವರಾಗಿ ಒಂದು ಬಾರಿ ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದಿಂದ ಸೇವೆ ಸಲ್ಲಿಸಿರುವಂತಹ ಮಹಾನ್ ಜನನಾಯಕ ಮತ್ತು ವಿವಿಧ ಸಮುದಾಯಗಳ ಜನರ ಜೊತೆ ಉತ್ತಮ  ಸ್ನೇಹ ಬಾಂಧವ್ಯ ಉಳ್ಳುವಂತವರು ಮತ್ತು ಸಚಿವರಾದ ಸಂದರ್ಭದಲ್ಲಿ ಎಲ್ಲಾ ಖ್ಯಾತಿಯನ್ನು ನಿರ್ವಹಿಸಿದಂತಹ ಅನುಭವ ಉಳ್ಳುವಂಥವರು ಡಾ ಜಿ ಪರಮೇಶ್ವರ್ ಅವರು  ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿರ್ವಹಿಸುವಂತವರು 2013ರಲ್ಲಿ ಕೆಪಿಸಿಸಿ ಅಧ್ಯಕ್ಷರ  ಅವಧಿಯಲ್ಲಿ ಎಲ್ಲಾ ಸಮುದಾಯದ ಶಾಸಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಹೋಗಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸುವಂತಹ  ಕೆಲಸ ಮಾಡಿದ ಮಹಾನ್ ವ್ಯಕ್ತಿ ಇವರು, ಇವರು ಅಧ್ಯಕ್ಷರ ಸ್ಥಾನದಲ್ಲಿದ್ದಾಗ ಕರ್ನಾಟಕ ಸರ್ಕಾರದಲ್ಲಿ ಅತಿ ಹೆಚ್ಚು ಬಹುಮತ ಗಳಿಸಿದಂತಹ ವ್ಯಕ್ತಿ ಕಾಂಗ್ರೆಸ್ ಪಕ್ಷಕ್ಕೆ ಈಗಲೂ ಕೂಡ ತಮ್ಮ ಕಾಯಕ ನಿಷ್ಠೆಯಲ್ಲಿ ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡುತ್ತಿರುವುದು ಹಾಗೂ ಜನರೊಂದಿಗೆ ಬೆರೆತು ಜನರ ಕಷ್ಟಗಳನ್ನು ಅರಿತು ಜನರಮಧ್ಯ ಬದುಕುವಂತಹ  ಜನನಾಯಕ ಡಾ.ಜಿ ಪರಮೇಶ್ವರ್ ಅವರು  ಮತ್ತು ಜನರಿಗೆ ನ್ಯಾಯವದಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವರು, ಪಕ್ಷವನ್ನು ಬಲವರ್ಧನೆ ಪಡಿಸುವಲ್ಲಿ ಪಕ್ಷದ ವರಿಷ್ಠರು  ಕೊಟ್ಟ ಜವಾಬ್ದಾರಿ  ನಿಭಾಯಿಸಿದಂತವರು, ಮತ್ತು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮೇಲ್ಮಟ್ಟಕ್ಕೆ ಬೆಳೆಸಿದಂತಹ ನಾಯಕ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಳ್ಳಬೇಕಾದರೆ ಅದರಲ್ಲಿ ಡಾ ಜಿ ಪರಮೇಶ್ವರ್ ಅವರ ಪಾತ್ರ ಬಹಳ ಮುಖ್ಯವಾಗಿದೆ ಡಾ ಜಿ ಪರಮೇಶ್ವರ್ ಅವರು 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಾ ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲು ಎಲ್ಲಾ ಅರ್ಹತೆಗಳು  ಇದ್ದವು  ಆದರೆ ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನ ಕೊಡದೆ ಉಪಮುಖ್ಯಮಂತ್ರಿ ಸ್ಥಾನ ಅಂಗೀಕರಿಸುವ ಪ್ರಸಂಗ ಬಂದಿತ್ತು ಆ ಒಂದು ಉದ್ದೇಶದಿಂದ ಡಾ ಜಿ ಪರಮೇಶ್ವರ್ ಅವರು ತಮ್ಮ ಸರ್ಕಾರ ಮುಂದೆ ಸಾಗಲಿ ಎಂಬ ಒಂದು ದೃಷ್ಟಿ ಇಟ್ಟುಕೊಂಡವರು ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು, ಹಾಗಾಗಿ ಅವರು ಎಲ್ಲಾ ಅರ್ಹತೆಗಳನ್ನು ಹೊಂದಿದ್ದು ಡಾ ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು.

promotions

ಅಖಿಲ ಕರ್ನಾಟಕ ಡಾ,ಜಿ ಪರಮೇಶ್ವರ್ ಯುವ ಸೈನ್ಯ (ರಿ) ರಾಯಚೂರು ಜಿಲ್ಲಾ ಅಧ್ಯಕ್ಷರಾದ ಬಾಲರಾಜ್ ವಿರುಪಾಪುರ  ಕೇಂದ್ರ ಎ ಐ ಸಿ ಸಿ  ಅಧ್ಯಕ್ಷರಿಗೆ ಪತ್ರಿಕೆ ಹೇಳಿಕೆ ಮೂಲಕ  ಮನವಿ ಮಾಡಿದರು.

Read More Articles