ಬಸವ ಗುರುಕುಲ ಪ್ರೌಢ ಶಾಲೆ ವಿದ್ಯಾರ್ಥಿ ತಾಲೂಕಿಗೆ ದ್ವಿತೀಯ ಶ್ರೇಣಿ ಸಂತಸ:ಪರಮ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು

ಔರಾದ:ಪಟ್ಟಣದ ಬಸವ ಗುರುಕುಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಪರಮ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ ಗಡಿನಾಡು ತಾಲೂಕ ಔರಾದನ ಬಸವ ಗುರುಕುಲ ಪ್ರೌಢ ಶಾಲೆಯಲ್ಲಿ 2022-23ನೆ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾದ ಹರ್ಷದ ತಂದೆ ಸುರೇಶ್ 98.56% ಈ ವಿದ್ಯಾರ್ಥಿಯು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾನೆ.ಈತನು ತನ್ನ ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ.ಇದಕ್ಕೆಲ್ಲ ಮೂಲ ಪ್ರೇರಣೆ ಡಾ.ಬಸವಲಿಂಗ ಪಟ್ಟದೇವರು.ಮುಖ್ಯ ಗುರುಗಳಾದ ನಿರ್ಮಲಾ ಸೇರಿ,ಹಾಗೂ ಸಿಬ್ಬಂದಿ ವರ್ಗದವರ ಸತತ ಪರಿಶ್ರಮ ಇದೆ.ಬಸವ ಗುರುಕುಲವು ಒಳ್ಳೆಯ ಶೈಕ್ಷಣಿಕ ಪರಿಸರದಿಂದ ಕೂಡಿದೆ.ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಶತ ತರಲು ಶ್ರಮಿಸಬೇಕು ಎಂದರು.

promotions

ಕರ್ನಾಟಕ,ತೆಲಂಗಾಣ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳ ಗಡಿಬಾಗದಲ್ಲಿ ಕನ್ನಡ ಮಾದ್ಯಮ ಶಾಲೆಗಳಲ್ಲಿ ಅಗ್ರಶ್ರೇಣಿಯ ಸ್ಥಾನದಲ್ಲಿ ಇರುವ ಬಸವ ಗುರುಕುಲ ಪ್ರೌಢ ಶಾಲೆಯಲ್ಲಿ ಮುಖ್ಯ ಗುರುಗಳ ಮಾರ್ಗದರ್ಶನ ಹಾಗೂ ಸಿಬ್ಬಂದಿ ವರ್ಗದವರ ನಿರಂತರ ಪರಿಶ್ರಮದ ಫಲವಾಗಿ ಒಳ್ಳೆಯ ಫಲತಾಂಶ ಬರಲು ಸಾಧ್ಯವಾಯಿತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫಲತಾಂಶದತ್ತ ಸಾಗಬೇಕು ಎಂದರು.

promotions

ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯರಾದ ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು.

ಭಾಲ್ಕಿಯ ಸಂಗಮೇಶ್ವರ ಶಾಲೆಯ ಸ್ಥಳೀಯ ಅದ್ಯಕ್ಷರು ಹಾಗೂ ಆಡಳಿತಾಧಿಕಾರಿಗಳಾದ ಶ್ರೀ ಧನರಾಜ ಬಂಬುಳಗೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬಸವ ಗುರುಕುಲ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಗುರುಗಳಾದ ನಿರ್ಮಲಾ ಸೇರಿ,ಶ್ರೀ ಬಸವೇಶ್ವರ ಡಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶರಣಪ್ಪ ನೌಬಾದೆ,ಸಿಬಿಪಿ ITI ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ ಗಂದಿಗುಡೆ,ಬಸವ ಗುರುಕುಲ ಪಬ್ಲಿಕ್ ಶಾಲೆಯ ಮು.ಗು.ಶ್ರೀಮತಿ ಸನ್ವರ್ ಸುಲ್ತಾನಾ,ಸಿಬ್ಬಂದಿಗಳಾದ ನಾಗನಾಥ ಶಂಕು,ಸಂಜೀವ ವಲಾಂಡೆ,ಗುರುರಾಜ ಕಸ್ತೂರೆ,ಸಂಗಪ್ಪ ರಾವಳೆ,ಶಿವು ದ್ಯಾಡೆ ಇನ್ನಿತರರು ಉಪಸ್ಥಿತರಿದ್ದರು.
 

Read More Articles