ಜಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಮುಖ್ಯಮಂತ್ರಿಗಳಿಗೆ ಬಸವರಾಜ ಮ್ಯಾಗಳಮನಿ ಒತ್ತಾಯ
- Shivaraj Bandigi
- 15 Jan 2024 , 12:36 AM
- Koppal
- 169
ಗಂಗಾವತಿ: ರಾಜ್ಯದ ವಿಧಾನಸಭಾ ಚುನಾವಣೆ ಗೆದ್ದಿರುವಂತಹ ಮುಖ್ಯಮಂತ್ರಿ ಮತ್ತು ಶಾಸಕರುಗಳ ಪ್ರಮಾಣ ವಚನ ಸಂದರ್ಭದಲ್ಲಿ

ಸಚಿವರಾಗಿ ಜಮೀರ ಅಹ್ಮದ್ ಅವರು ಇಂಗ್ಲಿಷ್ಮಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಭಾಷಾವಾರು ರಾಜ್ಯಗಳಿಗೆ ಅಪಮಾನವಾಗಿದೆ.

ಮಾಡಿದ್ದಾರೆ ಮತ್ತು ಸುಂದರ ಸಮಾರಂಭಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮಾತನಾಡಿ ಜಮೀರ್ ಅಹ್ಮದ್ ಖಾನ್ ಅವರು ಕನ್ನಡ ಕನ್ನಡದಲ್ಲಿ ಪ್ರಮಾಣವಚನ ಓದುವುದನ್ನು ಬಿಟ್ಟು ಇಂಗ್ಲೀಶ್ನಲ್ಲಿ ಪ್ರಮಾಣವಚನ ಓದಿರುವುದು ಎಲ್ಲಾ ಕನ್ನಡಿಗರಿಗೆ ಮತ್ತು ಕನ್ನಡಪರ ಸಂಘಟನೆಗಳು ಕೆಂಗಣ್ಣಿಗೆ ಗುರಿಯಾಗಿದ್ದಾರೆ ಮತ್ತು ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆಂದು ಬಸವರಾಜ ಮ್ಯಾಗಳಮನಿ ಅವರು ಜಮೀರ್ ಅಹ್ಮದ್ ವಿರುದ್ಧ ಗುಡುಗಿದ್ದಾರೆ ಮತ್ತು ಕರ್ನಾಟಕ ಸರಕಾರ ಕನ್ನಡವನ್ನು ಅಧಿಕೃತವಾಗಿ ಆಡಳಿತ ಭಾಷೆ ಎಂದು ಒಪ್ಪಿದೆ.
ಕನ್ನಡವನ್ನು ಅನುಷ್ಠಾನ ಗೊಳಿಸಬೇಕಾದ ಸಚಿವರೇ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ತೀರ ಅನುಚಿತ ನಡೆಯಾಗಿದೆ ಎ೦ದರು.
ಈ ವಿಷಯವನ್ನು ಮುಖ್ಯಮಂತ್ರಿ ಅವರು ಗಂಭೀರವಾಗಿ ಪರಿಗಣಿಸಿ, ತಮ್ಮ ಸಚಿವ ಸಂಪುಟದ ಸಚಿವರು ನಡೆಯನ್ನು ಕನ್ನಡದಲ್ಲೇ ಆಡಳಿತ ನಡೆಸುವುದರ ಜೊತೆಗೆ
ಸಾರ್ವಜನಿಕವಾಗಿ ಮತ್ತು ವೈಯಕ್ತಿಕವಾಗಿ ಕನ್ನಡದಲ್ಲೇ ವ್ಯವಹರಿಸುವಂತೆ ಸೂಚಿಸಬೇಕು ಮತ್ತು ಜಮೀರ್ ಅಹ್ಮದವರು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಬಸವರಾಜ ಮ್ಯಾಗಳಮನಿ ಅವರು ಪತ್ರಿಕಾ ಪ್ರಕಟಣೆ ಮುಖಾಂತರ ಸರಕಾರಕ್ಕೆ ಮನವಿ ಮಾಡಿದರು.










