ಪ್ರತಿಯೊಬ್ಬರಿಗೂ ಮೂಲಭೂತವಾಗಿ ಶಿಕ್ಷಣ ಆಹಾರ ಹಾಗೂ ಆರೋಗ್ಯದ ಕಾಳಜಿ ಅತ್ಯಾವಶ್ಯಕವಾಗಿದೆ: ಡಾ. ಎಸ್.ಎಸ್ ಪಾಟೀಲ

ಮೂಡಲಗಿ: ಪ್ರತಿಯೊಬ್ಬರಿಗೂ ಮೂಲಭೂತವಾಗಿ ಶಿಕ್ಷಣ ಆಹಾರ ಹಾಗೂ ಆರೋಗ್ಯದ ಕಾಳಜಿ ಅತ್ಯಾವಶ್ಯಕವಾಗಿದೆ. ಸದೃಢವಾದ ಶರೀರ ಹೊಂದಲು ವೈದ್ಯರುಗಳ ಸಲಹೆ ಸೂಚನೆಗಳು ಅವಶ್ಯಕ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಡಾ. ಎಸ್.ಎಸ್ ಪಾಟೀಲ ಹೇಳಿದರು.

promotions

ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಸಭೆ ಮತ್ತು ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ವಿನೂತನ ರೋಗ ರುಜಣುಗಳು ಉಂಟಾಗುತ್ತಿದ್ದು, ಕೇಲವೊಂದು ಕಾಯಲೆಗಳು ವೈದ್ಯ ರಂಗಕ್ಕೆ ಸವಾಲೆಸೆಯುತ್ತವುಗಳಾಗಿವೆ. ಸ್ಥಳೀಯವಾಗಿ ಉಲ್ಬಣಿಸುವಂತಹ ಸಾಂಕ್ರಾಮಿಕ ರೋಗಗಳನ್ನು ಮುಂಜಾಗೃತ ಕ್ರಮವಾಗಿ ಹತೋಟಿಗೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. 

promotions

ಸರಕಾರ ಒದಗಿಸುವ ಆರೋಗ್ಯ ಪರ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಆರ್ಥಿಕ ಹೊರೆ ಕಡಿಮೆಗೊಳಿಸುವದರ ಜೊತೆಗೆ ಉತ್ತಮ ದೇಹಾರೋಗ್ಯ ಹೊಂದಲು ಸಹಾಯ ಮಾಡಬೇಕೆಂದರು.

ಮೂಡಲಗಿ ಪಿಎಸ್‌ಐ ಎಚ್ ವೈ ಬಾಲದಂಡಿ, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಚಿದಾನಂದ ಮುಗಳಖೋಡ ಮಾತನಾಡಿ ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ನೀಡುಲಾಗುವದು. ಪುರಸಭೆಯಿಂದ ಕಸ ವಿಲೇವಾರಿ ಮತ್ತು ಸ್ವಚ್ಛತೆಗಾಗಿ ಸಿಬ್ಬಂದಿಯ ಸಯೋಗದೊಂದಿಗೆ ಸಹಕಾರ ನೀಡುವುದಾಗಿ ಹೇಳಿದರು.

ಸಭೆಯಲ್ಲಿ ಆರೋಗ್ಯ ರಕ್ಷಾ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಡಾ. ಎಸ್ ಎಸ್ ಪಾಟೀಲ, ರವಿ ಸೋನವಾಲಕರ, ಈಶ್ವರ ಕಂಕನವಾಡಿ, ಮಲ್ಲು ಯಾದವಾಡ ಇವರುಗಳನ್ನು ಸತ್ಕರಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕ ಪಂಚಾಯತ ಇಒ ಎಫ್ ಜಿ ಚಿನ್ನನವರ ವಹಿಸಿದ್ದರು. ಡಾ. ಭಾರತಿ ಕೋಣಿ, ಬಿಇಒ ಕಛೇರಿಯ ಆರ್ ವಿ ಯರಗಟ್ಟಿ, ಡಾ. ದೀಪಾ ಮಾಚಪ್ಪನವರ ಶಿವಲಿಂಗ ಪಾಟೀಲ,  ಸದಸ್ಯ ಕಾರ್ಯದರ್ಶಿ ಹಾಗೂ ಆಡಳಿತ ವಿದ್ಯಾಧಿಕಾರಿಗಳು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

Read More Articles