ಬೆಳಗಾವಿ ಬಾರ್ ಅಸೋಸಿಯೇಷನ್ ನೂತನ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ ಅವರಿಗೆ ಹುಕ್ಕೇರಿ ಶ್ರೀಗಳ ಆಶೀರ್ವಾದ

ಬೆಳಗಾವಿ : 

promotions

ಬೆಳಗಾವಿ ಬಾರ್ ಅಸೋಸಿಯೇಷನ್ ನ ನೂತನವಾಗಿ ಅಧ್ಯಕ್ಷರಾಗಿ ಆರನೇ ಬಾರಿಗೆ ಆಯ್ಕೆಯಾದ ಎಸ್.ಎಸ್.ಕಿವಡಸಣ್ಣವರ ಅವರನ್ನು ಸೋಮವಾರ ಇಲ್ಲಿನ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಶ್ರೀ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ ಗೌರವಿಸಿ ಸನ್ಮಾನಿಸಿದರು.

promotions

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಎಸ್.ಕಿವಡಸಣ್ಣವರ ಮಾತನಾಡಿ, ಆರನೇ ಬಾರಿಗೆ ಬೆಳಗಾವಿ ವಕೀಲರು ಒಮ್ಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ‌. ಪ್ರಮಾಣಿಕವಾಗಿ ವಕೀಲರಿಗೆ ಬೇಕು ಬೇಡಿಕೆಗಳಿಗೆ ಅನುಸಾರವಾಗಿ ಕೆಲಸ ಮಾಡುತ್ತೇನೆ. ವಕೀಲರ ಸಂಘದ ಇತಿಹಾಸದಲ್ಲಿ ಆರನೇ ಬಾರಿಗೆ ಅಧ್ಯಕ್ಷರನ್ನಾಗಿ ಮಾಡಿರುವ ಇತಿಹಾಸ ಇಲ್ಲ. ವಕೀಲರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಇದರ ಜೊತೆಗೆ ರಾಮತೀರ್ಥ ನಗರದ ರಹವಾಸಿಗಳ ಹಾಗೂ ಶಿವಾಲಯ ಟ್ರಸ್ಟ್ ನ ಕಮಿಟಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದೇ‌ನೆ.

ನಮ್ಮ ಎಲ್ಲಾ ಕಾರ್ಯದ ಹಿಂದೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದದ ಜೊತೆಗೆ ಮಾರ್ಗದರ್ಶನವೂ ಇದೆ ಎಂದರು.

ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಸ್.ಎಸ್.ಕಿವಡಸಣ್ಣವರ ಅವರು ಶ್ರೀಮಠದ ಆಪ್ತ ಶಿಷ್ಯರು. ಸಾಮಾಜಿಕ, ಧಾರ್ಮಿಕವಾಗಿ ಕಾರ್ಯವನ್ನು ನಿರ್ವಹಿಸುವುದರ ಜೊತೆಗೆ ಆರನೇ ಬಾರಿ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂದರೆ ಇವರ ಮೇಲೆ ವಕೀಲರು ಎಷ್ಟು ವಿಶ್ವಾಸ ಇಟ್ಟಿದ್ದಾರೆ ಎಂದು ತಿಳಿಯುತ್ತದೆ. ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಇನ್ನಷ್ಟು ಹೆಚ್ಚಿನ ಕಾರ್ಯ ಮಾಡಲಿ ಎಂದು ಶುಭ ಹಾರೈಸಿದರು.

ಈ‌ ಸಂದರ್ಭದಲ್ಲಿ ಬಿಜೆಪಿ ಮುಖಂಡ ವೀರೇಶ ಕಿವಡಸಣ್ಣವರ, ನ್ಯಾ. ಪ್ರಶಾಂತ್ ಒಡೆಯರ್ ಉಪಸ್ಥಿತರಿದ್ದರು.

Read More Articles