ಬೆಳಗಾವಿ ಉತ್ತರಕ್ಕೆ ಪ್ರಭಾವಿ ಲಿಂಗಾಯತ ನಾಯಕನಿಗೆ ಜಾಕ್ ಪಾಟ್

ಬೆಳಗಾವಿ :ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗಿ ನಡೆದಿದೆ. ಬೆಳಗಾವಿಯ ಉತ್ತರ ಮತಕ್ಷೇತ್ರದಲ್ಲಿ ಪ್ರಭಲ ಲಿಂಗಾಯತ ಸಮುದಾಯಕ್ಕೆ ಆಮ್ ಆದ್ಮಿ ಪಕ್ಷದಿಂದ ರಾಜಕುಮಾರ ಟೋಪಣ್ಣವರ ಸೇರಿದಂತೆ 28 ಜನರಿಗೆ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿದೆ.

promotions

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡುವ ಪಕ್ಷಗಳಿಗೆ ವಿವಿಧ ಲಿಂಗಾಯತ ಸಂಘಟನೆಗಳು ಬೆಂಬಲ ನೀಡುವುದಾಗಿ ಠರಾವ್ ಪಾಸ್ ಮಾಡಿದ್ದರು. ಅದರಂತೆ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಲಿಂಗಾಯತರ ಪರ, ಅಭಿವೃದ್ಧಿಯ ವಿಚಾರದಲ್ಲಿ ಧ್ವನಿ ಎತ್ತುವ ಪ್ರಭಾವಿ ಲಿಂಗಾಯತ ನಾಯಕನಿಗೆ ಆಮ್ ಆದ್ಮಿ ಪಕ್ಷ ಟಿಕೆಟ್ ಘೋಷಣೆಯಾಗಿದ್ದು, ಲಿಂಗಾಯತ ಸಮುದಾಯದವರ ಅಭಿಮಾನಕ್ಕೆ ಕಾರಣವಾಗಿದೆ.

promotions

ಬೆಳಗಾವಿ ಜಿಲ್ಲೆಯಲ್ಲಿ ಮೂರು ಕ್ಷೇತ್ರದಲ್ಲಿ ಟಿಕೆಟ್ ಘೋಷಣೆ ಮಾಡಿರುವ ಆಮ್ ಆದ್ಮಿ ಪಕ್ಷ ಸವದತ್ತಿ ಮತಕ್ಷೇತ್ರದಲ್ಲಿ ಬಾಪುಗೌಡ ಪಾಟೀಲ, ಬೆಳಗಾವಿ ಉತ್ತರ ಮತಕ್ಷೇತ್ರದಿಂದ ರಾಜಕುಮಾರ ಟೋಪಣ್ಣವರ ಹಾಗೂ ನಿಪ್ಪಾಣಿ ಮತಕ್ಷೇತ್ರದಿಂದ ರಾಜೇಶ ಪಾಟೀಲಗೆ ಟಿಕೆಟ್ ಘೋಷಣೆ ಮಾಡಿದೆ.

Read More Articles