ಅದ್ದೂರಿ ರಾಜ್ಯೋಸ್ತವ ಪೂರ್ವಭಾವಿ ಸಭೆ ನಡೆಸಿದ ಪೊಲೀಸ್ ಆಯುಕ್ತರು
- Shivaraj Bandigi
- 14 Jan 2024 , 6:01 AM
- Belagavi
- 337
ಬೆಳಗಾವಿ : ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಗೆ ವಿವಿಧ ಕನ್ನಡ ಸಂಘಟನೆಗಳು ಭಾಗವಹಿಸಿದ್ದು ನಗರ ಪೋಲಿಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಐಪಿಎಸ್ ಮುಂಬರುವ ರಾಜ್ಯೋತ್ಸವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬ್ಯಾನರ್, ಡಿಜೆ,ಧ್ವನಿ ವರ್ಧಕ, ಸಾಮಾಜಿಕ ಜಾಲತಾಣಗಳ ಬಳಕೆ ಹಾಗು ಇತರ ವಿಷಯದ ಬಗ್ಗೆ ನಿರ್ದೇಶನ ನೀಡಿದರು.

ಈ ಸಮಯದಲ್ಲಿ ವಿವಿಧ ಕನ್ನಡ ಸಂಘಟನೆಗಳು ತಮ್ಮ ಅಭಿಪ್ರಾಯ ಹಾಗು ಸಲಹೆಗಳನ್ನು ವ್ಯಕ್ತ ಪಡಿಸಿ ,ಕನ್ನಡ ರಾಜ್ಯೋತ್ಸವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಭರವಸೆ ನೀಡಿದರು.











