ಅದ್ದೂರಿ ಗಣಪತಿ ವಿಸರ್ಜನೆಗೆ ಮಾರ್ಗಸೂಚಿ ಹೊರಡಿಸಿದ ಬೆಳಗಾವಿ ಪೊಲೀಸ್

ಬೆಳಗಾವಿ :ದಿನಾಂಕ: 09/09/2022 ರಂದು ಬೆಳಗಾವಿ ನಗರದಲ್ಲಿ ಸಾರ್ವಜನಿಕ ಶ್ರೀ. ಗಣೇಶ ಮೂರ್ತಿಗಳ ಮೆರವಣಿಗೆಯು ನರಗುಂದಕರ ಭಾವೆ ಚೌಕದಿಂದ ಪ್ರಾರಂಭವಾಗಿ ಮಾರುತಿ ಗ‍ಲ್ಲಿಯ್ ಹುತಾತ್ಮ ಚೌಕ, ರಾಮದೇವಗಲ್ಲಿ , ಸಮಾದೇವಿ ಗಲ್ಲಿ, ಯಂಡೆಬೂಟ, ಕಾಲೇಜ್ ರಸ್ತೆ, ಧರ್ಮವೀರ ಸಂಭಾಜಿ ಚೌಕ (ಬೋಗಾರವೇಸ್),ರಾಮಅಂಗಂಡ ಗಲ್ಲಿ ರಸ್ತೆ, ಅಳಕಚೌಕ, ಹೇಮುಕಾಲನಿ ಚೌಕ (ಶಿವಭವನ),ಶನಿ ಮಂದಿರ, ಕಪಿಲೇಶ್ವರ ಓವರ ಬ್ರಿಟ್ ಮೂಲಕ ಕಪಿಲೇಶ್ವರ ಮಂದಿರದ ಬಳ ಮುಕಾಯಗೊಳ್ಳಲಿದೆ .

promotions

ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಹಿನ್ನೆಲೆಯಲ್ಲಿ ದಿನಾಂಕ: 09/09/2022 ರಂದು 02-00 ಗಂಟೆಯಿಂದ ದಿನಾಂಕ: 10/09/2022 ರಂದು ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗಿನಂತೆ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಕೋರಲಾಗಿದೆ.

promotions

1) ಅಶೋಕ ಎಲ್ಲರ ವೃತ್ತ-ಆರ್‌ಟಿಓ-ಚನ್ನಮ್ಮಾ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ ಕಡಗೆ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಸಂಗೋಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಿಬಿ ರಸ್ತೆ ಮಾರ್ಗವಾಗಿ ಕೃಷ್ಣದೇವರಾಯ ವೃತ್ತ ವಾಯ್ ಜಂಕ್ಷನ್ ಸದಾಶಿವ ನಗರ, ಲಕ್ಷ್ಮೀ ಕಾಂಪ್ಲೆಕ್ಸ್, ವಿಶ್ವೇಶ್ವರಯ್ಯ ನಗರ ಬಾಚಿ ಕ್ರಾಸ್, ಗಾಂಧಿ ಸರ್ಕಲ್ ಶೌರ್ಯ ಚೌಕ (ಮಿಸ್ಟ್ರಿ ಆಸ್ಪತ್ರೆ ಸರ್ಕಲ್). ಕೇಂದ್ರೀಯ ವಿದ್ಯಾಲಯ ನಂ.2. ಶರ್ಕತ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.

2) ಖಾನಾಪೂರ ಕಡೆಯಿಂದ ನಗರ ಭಾಗದಿಂದ ರಾಷ್ಟ್ರೀಯ ಹೆದ್ದಾರಿಗೆ ಸಾಗುವ ಮತ್ತು ಗೋಗಟೆ ಸರ್ಕಲ್ ಕಡೆಯಿಂದ ರೇಲ್ವೆ ಸ್ಟೇಶನ, ಸ್ಟೇಶನ್ ರಸ್ತೆ, ಹೆಡ್ ಪೋಸ್ಟ್ ಆಫೀಸ್ ಸರ್ಕಲ್ ಮೂಲಕ ಶನಿ ಮಂದಿರ ಕಡೆಗೆ ಸಂಚರಿಸುವ ಎಲ್ಲ ಗ್ಲೋಬ್ ಥಿಯೇಟರ್ ಸರ್ಕಲ್‌ದಲ್ಲಿ ಎಡತಿರುವ ಪಡೆದುಕೊಂಡು ಶರ್ಕತ್ ಪಾರ್ಕ ಕೇಂದ್ರೀಯ ವಿದ್ಯಾಲಯ ನಂ.2. ಶೌರ್ಯ ಚೌಕ (ಮಿಸ್ಟ್ರಿ ಆಸ್ಪತ್ರೆ ಸರ್ಕಲ್‌),ಗಾಂಧಿ ಸರ್ಕಲ್ (ಅರಗನ ತಲಾಬ),ಎಡತಿರುವ ಪಡೆದುಕೊಂಡು ಗಣೇಶ ಮಂದಿರ ಹಿಂಡಲಗಾ ರಸ್ತೆ, ಡಂಬಲ್ ರೋಡ್ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರಿ ಮುಂದೆ ಸಾಗುವದು .

3) ಜೀಜಾಮಾತಾ ಸರ್ಕಲ್ ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವ ಚೌಕ/ಕಂಬಳಿ ಖೂಟ, ಪಿಂಪಳ ಕಟ್ಟಾ. ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳನ್ನು ಜೀಜಾ ಮಾತಾ ಸರ್ಕಲ್‌ದಿಂದ ನೇರವಾಗಿ ಸೆಂಟ್ರಲ್ ಬಸ್ ಸ್ಟ್ಯಾಂಡ ಅಥವಾ ಪ್ಯಾಟಸನ್ ಶೋರೂಮ್ ಕಡೆ ಹಳೆ ಪಿಬಿ ರಸ್ತೆಯ ಮೂಲಕ ಮುಂದೆ ಸಾಗುವುದು.

4) ನಾಥಪೈ ಸರ್ಕಲ್ ಕಡೆಯಿಂದ ಬ್ಯಾಂಕ ಆಫ್ ಇಂಡಿಯಾ ಎಸ್‌ಪಿಎಮ್ ರಸ್ತೆ ಮಾರ್ಗವಾಗಿ ಕಪಿಲೇಶ್ವರ ರೇಲ್ವೆ ಓವರ್‌ ಬ್ರಿಜ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಬ್ಯಾಂಕ್ ಆಫ್ ಇಂಡಿಯಾ ವೃತ್ತದಲ್ಲಿ ಬಲತಿರುವು ಪಡೆದುಕೊಂಡು ಹಳೆ ಪಿಬಿ ರಸ್ತೆಗೆ ಸೇರಿ ಮುಂದೆ ಸಾಗುವುದು.

5) ಹಳೆ ಪಿಬಿ ರಸ್ತೆ. ವಿ.ಆರ್.ಎಲ್ ಲಾಜಿಸ್ಟಿಕ್. ಭಾತಕಾಂಡೆ ಸ್ಕೂಲ್ ಮಾರ್ಗವಾಗಿ ಕಪಿಲೇಶ್ವರ ರೇಲ್ವೆ ಓವರ್‌ ಬ್ರಿಜ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಸಂಭಾಜಿ ರಸ್ತೆ ಬಳಸಿಕೊಂಡು ಬಸವೇಶ್ವರ ವೃತ್ತ ಖಾಸಬಾಗ, ನಾಥಪೈ ಸರ್ಕಲ್ ಮೂಲಕ ಸಂಚರಿಸುವುದು.

6) ಹಳೆ ಪಿಬಿ ರಸ್ತೆ, ಯಶ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಮೂಲಕ ರೇಲ್ವೆ ಅಂಡರ್ ಬ್ರಿಜ್ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳು ಯಶ್ ಆಸ್ಪತ್ರೆ ಹತ್ತಿರ ಎಡ/ಬಲ ತಿರುವು ಪಡೆದುಕೊಂಡು ಭಾತಕಾಂಡೆ ಸ್ಕೂಲ್/ತಾನಾಜಿ ಗಲ್ಲಿ ರೇಲ್ವೆ ಗೇಟ ಮೂಲಕ ಮುಂದೆ ಸಾಗುವದು.

7) ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಓವರ್‌ ಬ್ರಿಜ್ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಎಸ್‌ಪಿಎಮ್ ರಸ್ತೆ ಕಡೆಗೆ ಸಂಚರಿಸದೇ ಮರಾಠಾ ಮಂದಿರ ಗೋವಾ ವೇಸ್ ಸರ್ಕಲ್ ಕಡೆಗೆ ಸಂಚರಿಸುವುದು.

8) ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆ ಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ್ ಕಡೆ ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುತ್ತಿದೆ.

9) ಚನ್ನಮ್ಮ ವೃತ್ತದಿಂದ ಮುಖ್ಯ ಮೆರವಣಿಗೆ ಸೇರುವ ಮಾರ್ಗ ಚನ್ನಮ್ಮ ವೃತ್ತದಿಂದ ಶನಿವಾರ ಖೂಟವರೆಗಿನ ಕಾಕತಿವೇಸ್ ರಸ್ತೆ, ಶನಿವಾರ ಖೂಟದಿಂದ ಕಂಬಳ ಟವರೆಗಿನ ಗಣಪತಿಗಲ್ಲಿ . ರಸ್ತೆ ಹಾಗೂ ಮೆರವಣಿಗೆ ಸಾಗುವ ಮಾರ್ಗವಾದ ನರಗುಂದಕರ, ಭಾವೆ ಚೌಕ, ಮಾರುತಿ ಗಲ್ಲಿ , ಹುತಾತ್ಮ ಚೌಕ, ರಾಮದೇವ ಗಲ್ಲಿ . ಸಮಾದೇವಿ ಗಲ್ಲಿ , ಕಾಲೇಜ ರಸ್ತೆ, ಧರ್ಮವೀರ ಸಂಭಾಜಿ ಚೌಕ, ರಾಮಲಿಂಗಂಡಿ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಾಲನಿ ಚೌಕ, ಶನಿಮಂದಿರ, ಕಪಿಲೇಶ್ವರ ಓವರ ಬ್ರಿಜ್, ಕಪಿಲೇಶ್ವರ ಮಂದಿರದ ಎರಡೂ ಬದಿಯ ರಸ್ತೆಗಳಲ್ಲಿ ಮತ್ತು ಕ್ಯಾಂಪ ಪ್ರದೇಶ ವ್ಯಾಪ್ತಿಯ ಹ್ಯಾವಲಾಕ್ ರಸ್ತೆ. ಕ್ಯಾಟಲ್ ರೋಡ್. ಯಂಡೇಟ ದಿಂದ ದೇಶಪಾಂಡೆ ಖೂಟವರೆಗಿನ ಹಾಗೂ ಪವನ ಹೊಟೇಲ್ ವರೆಗಿನ ರಸ್ತೆಗಳಲ್ಲಿ ದಿನಾಂಕ: 09/09/2022 ರಂದು ಮದ್ಯಾಹ್ನ 02-00 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಮೆರವಣಿಗೆ ವೀಕ್ಷಿಸಲು ಬರುವ ಸಾರ್ವಜನಿಕರ ವಾಹನಗಳ ನಿಲುಗಡೆ ಕುರಿತು ಗುರ್ತಿಸಲಾದ ಸ್ಥಳಗಳ ವಿವರ
1) ಬೆನನ್‌ಸ್ಮಿತ್ ಕಾಲೇಜ್ ಮೈದಾನ.

2) ಬೋಗಾರವೇಸ್ ಸರ್ಕಲ್‌ದಿಂದ ದೇಶಪಾಂಡೆ ಖೂಟ ಕಡೆಗೆ ಸಾಗಿದ ವನಿತಾ ವಿದ್ಯಾಲಯ ಮುಂದಿನ ಬೋಳ ರಸ್ತೆ.

3) ಧರ್ಮವೀರ ಸಂಭಾಜಿ (ಬೋಗಾರವೇಸ್) ಸರ್ಕಲ್‌ ಹತ್ತಿರದ ಶ್ರೀ. ಅಂಗರಾಜ ಪಾಟೀಲ ರವರ ಖುಲ್ಲಾ ಜಾಗೆ.

4) ಫಿಶ್ ಮಾರ್ಕೇಟ್ ದಿಂದ ಇಸ್ಲಾಮಿಯಾ ಸ್ಕೂಲ್ ಕಡೆಗೆ ಸಾಗಿದ ರಸ್ತೆಯ ಒಂದು ಬದಿಗೆ.

5) ಮರಾಠಾ ವಿದ್ಯಾನಿಕೇತನ ಮೈದಾನ [ಬನ್ನಿ ಮಂಟಪ).

6) ದೇಶಪಾಂಡೆ ಖೂಟ ದಿಂದ ಗಾಂಧಿ ಸರ್ಕಲ್ [ಅರಗನ ತಲಾಬ] ವರೆಗಿನ ರಸ್ತೆಯ ಒಂದು ಬದಿಗೆ.

7) ಖಂಜರಗಲ್ಲಿ ಪಾರ್ಕಿಂಗ್.

9) ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನವನ್ .

ಈ ಪ್ರಕಾರ ಪಾರ್ಕಿಂಗ್ ಕುರಿತು ಸ್ಥಳಗಳನ್ನು ಗುರ್ತಿಸಿದ್ದು, ಸಾರ್ವಜನಿಕರು ನಿಗಧಿಪಡಿಸಲಾದ ಸ್ಥಳಗಳಲ್ಲಿಯೇ ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದು. ಒಂದು ವೇಳೆ ನಿರ್ಬಂಧಿತ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿದ್ದಲ್ಲಿ ಅಂಥವರು ವಿರುದ್ಧ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗುವುದು. ಕಾರಣ ಸಾರ್ವಜನಿಕರು ಬೆಳಗಾವಿ ನಗರ ಮೋಸರೊಂದಿಗೆ ಸಹಕರಿಸಲು ಪೊಲೀಸ್ ಇಲಾಖೆ ಕೊರಿದೆ .

Read More Articles