ಬೆಳಗಾವಿ ಫೇಸ್ ಬುಕ್ ಫೇಜ್ ಟಿ ಶಟ್೯ಗೆ ಭಾರೀ ಬೇಡಿಕೆ
- 14 Jan 2024 , 9:41 PM
- Belagavi
- 497
ಬೆಳಗಾವಿ: ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಬಾರಿ ಬೆಳಗಾವಿ ಪೇಜ್ ನಿಂದ ಟಿ ಶಟ್೯ ಮಾರಾಟ ಮಾಡಲಾಗುತ್ತಿದ್ದ ಭರ್ಜರಿಯಾಗಿ ಮಾರಾಟವಾಗುತ್ತಿವೆ.

ಹೌದು. ಬೆಳಗಾವಿ ರಾಜ್ಯೋತ್ಸವ ಇಡೀ ರಾಜ್ಯಕ್ಕೆ ಪ್ರಸಿದ್ಧಿ ಪಡೆದಿದೆ. ಕಳೆದ ಎರಡೂ ವರ್ಷಗಳಿಂದ ಕೊರೊನಾ ಹಾಗೂ ಪುನೀತ್ ರಾಜಕುಮಾರ ಅಗಲಿಕೆಯಿಂದ ಅತ್ಯಂತ ಸರಳವಾಗಿ ರಾಜ್ಯೋತ್ಸವ ಆಚರಣೆ ಮಾಡಿದ್ದ ಕನ್ನಡಿಗರು ಈ ಬಾರಿ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬೆಳಗಾವಿ ಫೇಸ್ ಬುಕ್ ಪೇಜ್ ನವರು ಪುನೀತ್ ರಾಜ್‍ಕುಮಾರ್ ಭಾವ ಚಿತ್ರ ಇರುವ ಟಿ ಶಟ್೯ ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ.











