ಬೆಳಗಾವಿ ಉತ್ತರದ ಗದ್ದುಗೆ ಹಿಡಿಯಲು ಮಹಾ ಪೈಪೋಟಿ

ಬೆಳಗಾವಿ : ಬೆಳಗಾವಿ ಉತ್ತರದ ಗದ್ದುಗೆ ಹಿಡಿಯಲು ಮಹಾ ಪೈಪೋಟಿ ನಡೆದಿದ್ದು ಮತ ದಾರರನ್ನು ಸೆಳೆಯಲು ರಾಜಕಾರಣಿಗಳು ಕಣಕ್ಕಿಳಿದಿದ್ದಾರೆ.

promotions

ಬೆಳಗಾವಿ ಉತ್ತರದಲ್ಲಿ ಲಿಂಗಾಯತ ಸಮುದಾಯದ ಹಿಡಿತ ಪ್ರಬಲವಾಗಿದ್ದು ಬೆಳಗಾವಿ  ಉತ್ತರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಚಾಣಾಕ್ಷ ರೀತಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

promotions

ಬೆಳಗಾವಿ ಉತ್ತರದಲ್ಲಿ 4 ಲಿಂಗಾಯತ ಮುಖಂಡರು ಪೈಪೋಟಿ ನಡೆಸಿದ್ದು ಬೆಳಗಾವಿ ಉತ್ತರ ಯಾರ ಪಾಲಿಗೆ ವಾಲುವುದು ಕಾದು ನೋಡಬೇಕಾಗಿದೆ.

ಕೆಆರಪಿಪಿಯಿಂದ NRE ಪ್ರವೀಣ ಹಿರೇಮಠ , ಬಿಜೆಪಿಯಿಂದ ಡಾ.ರವಿ ಪಾಟೀಲ, ಆಪನಿಂದ ರಾಜಕುಮಾರ ಟೊಪ್ಪಣ್ಣವರ ಹಾಗು ಜೆಡಿಎಸನಿಂದ ಶಿವಾನಂದ ಮುಗಳಿಹಾಳ ಈ ನಾಲ್ಕು ಲಿಂಗಾಯತ ಮುಖಂಡರು ಕಣಕ್ಕಿಳಿದಿದ್ದು ಯಾರ ಪಾಲಿಗೆ ಉತ್ತರ ಎಂಬುದನ್ನು  ಮತದಾರರು ನಿರ್ಧರಿಸಲಿದ್ದಾರೆ.

ಪ್ರವೀಣ ಹಿರೇಮಠ ಒಬ್ಬ NRE ,ವಿದ್ಯಾವಂತ ಹಾಗು ಅಪಾರ ದೇಶಾಭಿಮಾನ ಹೊಂದಿರುವ ಅಭ್ಯರ್ಥಿಯಾಗಿದ್ದು ಗಾಲಿ ಜನಾರ್ಧನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಬೆಳಗಾವಿ ಉತ್ತರತಕ್ಕೆ ಇಳಿದಿದ್ದಾರೆ,ಈಗಾಗಲೇ NRE ಹಾಗು ಒಬ್ಬ ಮರ್ಚೆಂಟ್ ನೇವಿ ಅಭ್ಯರ್ಥಿ ಎಂದು ಹೆಸರು ಗಳಿಸಿರುವ ಪ್ರವೀಣ ಬೆಳಗಾವಿ ಉತ್ತರದ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

aap ಅಭ್ಯರ್ಥಿ ರಾಜಕುಮಾರ ಟೊಪ್ಪಣ್ಣವರ ಬಿಜೆಪಿ ತೊರೆದು ಆಮಆದ್ಮಿ ಪಾರ್ಟಿ ವತಿಯಿಂದ ಬೆಳಗಾವಿ ಉತ್ತರದ ಅಖಾಡಾಕ್ಕೆ ಇಳಿದಿದ್ದು ಹಲವು ದಿನಗಳಿಂದ ಬೆಳಗಾವಿಯಲ್ಲಿ ಅನೇಕ ಕಾರ್ಯಗಳ ಮೂಲಕ ಹೆಸರುವಾಸಿಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಕೂಡ ಒಬ್ಬ ಪ್ರಬಲ ಲಿಂಗಾಯತ ಅಭ್ಯರ್ಥಿಯಾಗಿದ್ದು ಬಿಜೆಪಿಯಲ್ಲಿ ಹಲವು ದಿನಗಳಿಂದ ದುಡಿದಿದ್ದಾರೆ, ಡಾ.ರವಿ ಅನೇಕ ಜನ ಕಲ್ಯಾಣ ಕಾರ್ಯಗಳ  ಮೂಲಕ ಹೆಸರುವಾಸಿಯಾಗಿದ್ದು ಬೆಳಗಾವಿ ಉತ್ತರ ಗೆಲ್ಲಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ.

ಜೆಡಿಎಸ ಅಭ್ಯರ್ಥಿ ಶಿವಾನಂದ ಮುಗಳಿಹಾಳ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಜೆಡಿಎಸ ಪಕ್ಷಕ್ಕೆ ಸೇರಿದ್ದು  ಒಬ್ಬ ಪ್ರಬಲ ಲಿಂಗಾಯತ ಅಭ್ಯರ್ಥಿಯಾಗಿ ಬೆಳಗಾವಿ ಉತ್ತರದ ಚುಕ್ಕಾಣಿ ಹಿಡಿಯಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ.

Read More Articles