ಹುಬ್ಬಳ್ಳಿ- ಪುಣೆ ವಂದೇ ಭಾರತ ರೈಲು ಯಾತ್ರೆಗೆ ಬೆಳಗಾವಿಗರು ಫುಲ್ ಗರಂ

ಬೆಳಗಾವಿ : ಸರ್ಕಾರದ ಇತ್ತೀಚಿನ ಬೆಳವಣಿಗೆಯಿಂದ, ಬೆಳಗಾವಿಯ ಜನರು ಮತ್ತೆ ಸರ್ಕಾರದ ನಿರ್ಧಾರದಿಂದ ನೊಂದಿದ್ದಾರೆ. ನಿರೀಕ್ಷಿತ ಬೆಂಗಳೂರು-ಬೆಳಗಾವಿ ವಂದೇ ಭಾರತ ರೈಲು ಯಾತ್ರೆಯನ್ನು ರದ್ದುಮಾಡಿ, ಅದರ ಬದಲು ಪುಣೆ-ಹುಬ್ಬಳ್ಳಿ ವಂದೇ ಭಾರತ ರೈಲುಗೆ ಅನುಮೋದನೆ ನೀಡಲಾಗಿದೆ. ಈ ನಿರ್ಧಾರವು ಬೆಳಗಾವಿಯ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಹತಾಶೆಯನ್ನು ಉಂಟುಮಾಡಿದೆ. ಬೆಂಗಳೂರು-ಹುಬ್ಬಳ್ಳಿ ರೈಲು ಅರಣ್ಯ ಪ್ರದೇಶದ ಮೂಲಕ ಹೋಗುವ ಕಾರಣ ಹಾಗೂ ಅಂತರದ ಸಮಸ್ಯೆಯಿಂದ ರದ್ದುಗೊಂಡರೆ, ಅದೇ ಮಾರ್ಗದಲ್ಲಿ ಪುಣೆ-ಹುಬ್ಬಳ್ಳಿ ರೈಲು ಓಡುವುದು ಹೇಗೆಂದು ಜನತೆ ಪ್ರಶ್ನಿಸುತ್ತಿದ್ದಾರೆ.

Your Image Ad

ಈ ಘಟನೆ ಸರ್ಕಾರದ ಬೆಳಗಾವಿಯತ್ತ ಇರುವ ದೃಷ್ಟಿಕೋನವನ್ನು ಸ್ಪಷ್ಟವಾಗಿ ತೋರಿಸುತ್ತಿದ್ದು, ರಾಜಕೀಯ ನಾಯಕರು ಬೆಳಗಾವಿಯ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ವ್ಯಕ್ತಪಡಿಸುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಕ್ಷೇತ್ರ ಹುಬ್ಬಳ್ಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸಿಕ್ಕಿಸಿಕೊಡುತ್ತಿದ್ದರೆ, ಬೆಳಗಾವಿಯ ಬಿಜೆಪಿಯ ಸಂಸದರು ಯಾಕೆ ಮೌನವಾಗಿದ್ದಾರೆ? ಆಡಳಿತ ಪಕ್ಷದ ನಾಯಕರೂ ಸಹ ಈ ವಿಷಯದಲ್ಲಿ ಏಕೆ ಮೌನ ವಹಿಸಿದ್ದಾರೆ?

Your Image Ad

ಹುಬ್ಬಳ್ಳಿಯ ಅಭಿವೃದ್ಧಿಗೆ ರಾಜಕೀಯ ಬೆಂಬಲ ದೊರಕುತ್ತಿದ್ದು, ಅಲ್ಲಿ ಐಟಿ ಕಂಪನಿಗಳು, ಉದ್ಯೋಗ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ವ್ಯಾಪಕವಾಗಿ ಅಭಿವೃದ್ಧಿ ಹೊಂದುತ್ತಿದ್ದರೆ, ರಾಜ್ಯದ ಎರಡನೇಯ ರಾಜಧಾನಿ ಬೆಳಗಾವಿಯ ಜನರು ಮಾತ್ರ ಅಭಿವೃದ್ಧಿಯಿಂದ ವಂಚಿತರಾಗುತ್ತಿದ್ದು, ತಾರತಮ್ಯ ನೀತಿಯಿಂದ ಬೇಸರಗೊಂಡಿದ್ದಾರೆ. ರೈಲು ಯೋಜನೆಯ ರದ್ದತೆಯು ಬೆಳಗಾವಿಯ ಹಿತಾಸಕ್ತಿಗಳನ್ನು ಕಡೆಗಣಿಸುವ ಮತ್ತೊಂದು ಉದಾಹರಣೆಯಾಗಿದೆ. ಬೆಳಗಾವಿಯ ಜನರು ಈ ಬಗ್ಗೆ ತಕ್ಷಣವೇ ಜಾಗ್ರತೆಯಾಗಬೇಕು, ತಮ್ಮ ಪ್ರತಿನಿಧಿಗಳನ್ನು ಪ್ರಶ್ನಿಸಿ, ಅವರಿಂದ ಸಮರ್ಪಕ ಪ್ರತಿಕ್ರಿಯೆ ಪಡೆಯಬೇಕಾಗಿದೆ.

Your Image Ad

ಬೆಳಗಾವಿಯು ಹುಬ್ಬಳ್ಳಿ ಬೆನ್ನಟ್ಟುವ ಬದಲು, ಸಮಾನವಾದ ಬೆಳವಣಿಗೆ ಮತ್ತು ಅವಕಾಶಗಳಿಗಾಗಿ ಒತ್ತಾಯಿಸಬೇಕಾಗಿದೆ. ಏಕೆಂದರೆ, ಜನರಿಗೆ ಉತ್ತಮ ಬದುಕಿನ ಹಕ್ಕಿದೆ, ಮತ್ತು ಇದನ್ನು ನೀಡಲು ರಾಜಕಾರಣಿಗಳು ಹೊಣೆಗಾರರಾಗಬೇಕು.

Your Image Ad

Read More Articles