ಕ್ರೀಡಾಪಟುಗಳ ಕನಸನ್ನು ನುಚ್ಚುನೂರು ಮಾಡುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ
- 15 Jan 2024 , 2:48 AM
- Belagavi
- 134
ಬೆಳಗಾವಿಯ ಹೃದಯ ಭಾಗದಲ್ಲಿರುವ ಕ್ರೀಡಾ ಸಂಕೀರ್ಣ ಕಟ್ಟಡ ಕೋಟ್ಯಂತರ ರೂಗಳನ್ನು ವೆಚ್ಚಮಾಡಿ ನಿರ್ಮಾಣಮಾಡಲಾಗಿದೆ ಆದರೆ ನಿರ್ಮಾಣವಾಗಿ 5ವರ್ಷ ಕಳೆದರು ಸಾರ್ವಜನಿಕರ ಬಳಕೆಗೆ ಬಾರದೆ ಬಿಕೋ ಅನ್ನುತಿದೆ.

ಈ ಬ್ರಹತ್ ಕ್ರೀಡಾ ಸಂಕೀರ್ಣ ಜಿಮ್ ,ಸ್ವಿಮಿಂಗ್ ಪೂಲ್ ,ಬ್ಯಾಡ್ಮಿಂಟನ್ ಕೋರ್ಟ್ ,ಫುಟ್ಬಾಲ್ ಗ್ರೌಂಡ್ ಹೊಂದಿದ್ದು ಕ್ರೀಡಾ ಪಟುಗಳಿಗೆ ಮತ್ತು ಸಾರ್ವಜನಿಕರಿಗೆ ಸದುಪಯೋಗವಾಗದೆ ಮದ್ಯ ಪಾನ್ ಮತ್ತು ಗಂಜ್ಯಾ ವ್ಯಸನಿಕರಿಗೆ ಸ್ವರ್ಗವಾಗಿದೆ ಮತ್ತು ಇಲ್ಲಿ ಮದ್ಯಪಾನದ ಒಡೆದ ಗ್ಲಾಸಗಳು ರಾರಾಜಿಸುತ್ತಿವೆ.

ಕಾಮನ ವೆಲ್ತ ಗೇಮ್ಸನಲ್ಲಿ ನಮ್ಮ್ ಭಾರತ ದೇಶ್ 4ನೇ ಸ್ಥಾನಗಳಿಸಿದೆ ಆದರೆ ನಮ್ಮ್ ಜಿಲ್ಲೆಯಲ್ಲಿ ಅದು ಬೆಳಗಾವಿಯ ಹೃದಯ ಭಾಗದಲ್ಲಿರುವ ಈ ಕ್ರೀಡಾ ಸಂಕೀರ್ಣ ಕ್ರೀಡಾ ಪಟುಗಳಿಗೆ ಸದುಪಯೋಗವಾಗದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅತ್ಯಂತ್ ಸುಸುಜ್ಜಿತವಾದ ಜಿಮನಲ್ಲಿ (ವ್ಯಾಯಾಮ ಸ್ಥಳ) ಎಲ್ಲಾ ತರಹದ್ ಸಲಕರಣೆಗಳು ಇದ್ದು ಉಪಯೋಗವಾಗದೆ ಬಿಕೋ ಅನ್ನುತ್ತಿವೆ ಇದರಲ್ಲಿ ರನ್ನಿಂಗ್ ಟ್ರ್ಯಾಕ್ ಮಷೀನ್ ,ಡಂಬೆಲ್ಸ್ ಮತ್ತು ಇತರ ದುಬಾರಿ ಸಲಕರಣೆಗಳನ್ನು ಅಳವಡಿಸಲಾಗಿದೆ.
ಇನ್ನು ಬ್ಯಾಡ್ಮಿಂಟನ್ ಕೋರ್ಟ್ ಒಂದ ಸಾರಿ ನಮ್ಮ ಈ ವಿಡಿಯೋ ನೋಡಿ ಇದು ನಮ್ಮ್ ಬೆಳಗಾವಿಯ್ ಹೊಸನ್ಮುಖ ಕ್ರೀಡಾಪಾಟುಗಳ ಕಣಿಸಿನ ಮೇಲೆ ತಣ್ಣೀರು ಎರಚಿದಂತಾಗಿದೆ.
ಮತ್ತೆ ಈ ಸ್ವಿಮಿಂಗ್ ಪೂಲ್ ಇದು ಸಾರ್ವಜನಿಕರ ಈಜುಕೊಳವಾಗದೆ ಕಪ್ಪೆಗಳ ಈಜುಕೊಳವಾಗಿದೆ ಮತ್ತು ಈ ಸ್ವಿಮಿಂಗ್ ಪೂಲನಲ್ಲಿರುವ ನೀರು ಬಳ್ಳಾರಿನಾಲಾದಲ್ಲಿನ ನೀರಿನಗಿಂತ ಕಲುಷಿತವಾಗಿದೆ.
ಲೋಕಲವಿವ ತಂಡದೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿಗಳು ಈ ಕಾಮಗಾರಿ ವಿರುದ್ದ ತಮ್ಮ್ ಕೋಪ ವ್ಯಕ್ತ್ ಪಡಿಸಿದರು.
ಈ ವಿಷಯದ್ ಬಗ್ಗೆ ಸಾರ್ವ ಜನಿಕರು ಹಲವಾರು ಬಾರಿ ಧ್ವನಿ ಎತ್ತಿದರೂ ಬೆಳಗಾವಿ ಮಹಾನಗರ ಪಾಲಿಕೆ ಕ್ಯಾರೇ ಅನ್ನುತಿಲ್ಲ ಮತ್ತು ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮಮಾಡಿದಂತಾಗಿದೆ.
ಈ ವಿಷಯದ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕೆಂದು ಸಾರ್ವ ಜನಿಕರ ಕಳಕಳಿಯಾಗಿದೆ.









