ಬೆಳಗಾವಿ ರಿಮೋಟ್ ಕಂಟ್ರೋಲ್ ಹುಬ್ಬಳ್ಳಿ-ಧಾರವಾಡದ ಕೈಯಲ್ಲಿ ಬೆಳಗಾವಿ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ - ಬೆಳಗಾವಿ ಜನಪ್ರತಿನಿಧಿಗಳಿಗೆ ಇಲ್ಲ ಆಹ್ವಾನ ?
- 14 Jan 2024 , 11:08 PM
- Belagavi
- 167
ಬೆಳಗಾವಿ : ರಾಜಕೀಯ ಶಕ್ತಿ ಕೇಂದ್ರ, ರಾಜಕೀಯ ಪವರ್ ಸೆಂಟರ್, ರಾಜ್ಯದಲ್ಲಿ ಅತೀ ಹೆಚ್ಚು ತೆರಿಗೆ ತುಂಬುವ ಎರಡನೇ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ಜಿಲ್ಲೆಗೆ ಸಂಬoಧಿಸಿದ ಡಿಕ್ಲರೇಷನ್ ತಾಂತ್ರಿಕ ಹೊಸ ಉದ್ಯಮಗಳ ಬೆಳವಣಿಗೆಗೆ ಸಂಬoಧಿಸಿದ ಕಾರ್ಯಕ್ರಮಕ್ಕೆ ಬೆಳಗಾವಿ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಹುಬ್ಬಳ್ಳಿಯಲ್ಲಿ ನಿರ್ಣಯ ತೆಗೆದುಕೊಂಡಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರನ್ನು ಹೊರತು ಪಡಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಜಿಲ್ಲೆಗಳಲ್ಲಿ ಡಿಕ್ಲರೇಷನ್ ಎಂಬ ಕಾರ್ಯಕ್ರಮವನ್ನು ಸರಕಾರ ಆಯೋಜನೆ ಮಾಡಿತ್ತು.

ಇದರಲ್ಲಿ ಬೆಳಗಾವಿಯ ಒಬ್ಬ ಜನಪ್ರತಿನಿಧಿಗಳು ಇಲ್ಲದೆ ಕಾರ್ಯಕ್ರಮ ಮಾಡಿರುವುದು ನಾನಾ ವಿಶ್ಲೇಷಣೆ ಮಾಡಲಾಗುತ್ತಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಬೆಂಬಲಿಗರು ಹಸ್ತಕ್ಷೇಪ ಮಾಡಿದ ಆರೋಪ ಮರೆ ಮಾಚುವ ಮುನ್ನ ಬೆಳಗಾವಿಗೆ ಸಂಬoಧಿಸಿದ ವಿಷಯಗಳನ್ನು ಹುಬ್ಬಳ್ಳಿ-ಧಾರವಾಡದ ರಾಜಕೀಯ ಮುಂಖಡರು ನಿರ್ಧರಿಸುತ್ತಿದ್ದರೂ ಬೆಳಗಾವಿ ಜನಪ್ರತಿನಿಧಿಗಳು ದಾಂಡಿಯಾ ಕಾರ್ಯಕ್ರಮ ಆಯೋಜನೆ ಮಾಡಿ ಅಭಿವೃದ್ಧಿಯ ಕಡೆ ಗಮನ ನೀಡುತ್ತಿಲ್ಲ ಎನ್ನುವ ಆಕ್ರೋಶದ ಮಾತುಗಳು ಪ್ರಜಾವಂತರಿoದ ಕೇಳಿ ಬರುತ್ತಿವೆ.
ಬಿಜೆಪಿ ಸರಕಾರದ ಬೆಳಗಾವಿ ಜಿಲ್ಲೆಯಲ್ಲಿರುವ ಶಾಸಕರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲ. ಕಳೆದ ಬಾರಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸುವ ಬದಲು ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಿ ಅನ್ಯಾಯ ಮಾಡಿದಾಗಲೂ ಧ್ವನಿ ಎತ್ತಲಿಲ್ಲ.
ಈಗಲೂ ಬೆಳಗಾವಿಯಲ್ಲಿ ಆಯೋಜಿಸಬೇಕಿದ್ದ ಟೆಕ್ಲೆರೆಥಾನ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದಕ್ಕ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಬೆಳಗಾವಿಯಲ್ಲಿ ಸಂಬoಧಿಸಿದ ಟೆಕ್ಲೆರೆಥಾನ್ ಕಾರ್ಯಕ್ರಮ ಇಲ್ಲಿಯೇ ಮಾಡಬೇಕು.
ಆದರೆ ಸಿಎಂ ಬೊಮ್ಮಾಯಿ ಅವರು ಹುಬ್ಬಳ್ಳಿಯವರಾಗಿರುವುದರಿಂದ ಅಲ್ಲಿ ಮಾಡಿ ಬೆಳಗಾವಿಗೆ ತಾರತಮ್ಯ ಮಾಡುತ್ತಿದ್ದಾರೆ. ಬೆಂಗಳೂರು ನಿಂದ ಹುಬ್ಬಳ್ಳಿಯವರಗೆ ಬುಲೆಟ್ ರೈಲು ಪ್ರಾರಂಭ ಮಾಡುತ್ತಿದ್ದಾರೆ. ಬೆಳಗಾವಿಯವರೆಗೂ ಮಾಡಲು ಏಕೆ ಸಾಧ್ಯವಾಗಲಿಲ್ಲ ಸರಕಾರಕ್ಕೆ ಎಂದ ಅವರು, ಅನುಕಂಪ ಮತ್ತು ಭಾವನಾತ್ಮಕ ಆಧಾರದ ಮೇಲೆ ಬೆಳಗಾವಿ ಜನರು ಮತ ಕೊಟ್ಟರೆ ಸಂಸದರೂ ಬೆಳಗಾವಿ ಅಭಿವೃದ್ಧಿಯಲ್ಲಿ ಯಾವುದೇ ಕೊಡುಗೆ ಇಲ್ಲ ಎಂದರು.
ಕಳೆದ ತಿಂಗಳು ಬೆಳಗಾವಿ ನಗರದಲ್ಲಿ ತಂತ್ರಜ್ಞಾನ ಸಂಬoಧಿಸಿದ ಸಮಾವೇಶ ಮಾಡಿ 300 ಜನ ಭಾಗಿಯಾಗಿದ್ದರು. ಹುಬ್ಬಳ್ಳಿಯಲ್ಲಿ ಮಾಡುವ ಕಾರ್ಯಕ್ರಮ ಸರಕಾರ ಇಲ್ಲಿಯೇ ಮಾಡಿದ್ದರೇ ಯಶಸ್ವಿಯಾಗುತ್ತಿತ್ತು.
ಬೆಳಗಾವಿ ಜನಪ್ರತಿನಿಧಿಗಳ ರಿಮೋಟ್ ಕಂಟ್ರೋಲ್ ಈಗ ಹುಬ್ಬಳಿಯಲ್ಲಿಂದ ಆಪರೇಟ್ ಆಗುತ್ತಿರುವುದು ದುರ್ದೈವದ ಸಂಗತಿ.










