ಬೆಳಗಾವಿ ಅಧಿವೇಶನ ಉ.ಕ ಭಾಗದ ಜನರ ನಿರೀಕ್ಷೆ ಹುಸಿಗೊಳಿಸದಿರಲಿ ಸರಕಾರ : ಬಿವೈವಿ

ಬೆಳಗಾವಿ :

promotions

ಉತ್ತರ ಕರ್ನಾಟಕದ ಹೆಬ್ಬಾಗಿಲು ಬೆಳಗಾವಿ ಜಿಲ್ಲೆ. ಈ ಭಾಗದ ಬಡವರಿಗೆ, ರೈತರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಸುವರ್ಣಸೌಧ ಚಿಂತನೆ ಮಾಡಿದ್ದು ಯಡಿಯೂರಪ್ಪನವರು. ಚಳಿಗಾಲದ ಅಧಿವೇಶನ ಈ ಭಾಗದ ರೈತರಿಗೆ ಬಡವರಿಗೆ ಅನೂಕೂಲವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

promotions

ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಜನತೆ ಈ‌ ಅಧಿವೇಶನದ ಮೇಲೆ ಬಹಳ ನಿರೀಕ್ಷೆಯಿಟ್ಟಿದ್ದಾರೆ‌. ಕಬ್ಬು ಬೆಳೆಗಾರರು ಬಹಳ ನಿರೀಕ್ಷೆಯಲ್ಲಿದ್ದಾರೆ. ಪ್ರತಿಯೊಬ್ಬರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸರಕಾರ ಸಿಹಿ ಸುದ್ದಿ ಕೊಡಲಿ ಎಂದರು.

ಹೊಸ ಸರಕಾರದಿಂದ ಜನರು ಸಾಕಷ್ಟು ನಿರೀಕ್ಷೆಗಳನ್ನು ಮಾಡಿದ್ದರು. ಆದರೆ ದಿನ ಕಳೆದಂತೆ ಎಲ್ಲ ಹುಸಿಯಾಗಿದೆ. ಅಧಿವೇಶನದ ಮುಖಾಂತರವಾದರೂ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲಿ ಎಂದರು.

 ಸದನದ ಒಳಗೆ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಲಿದೆ. ಸಮರ್ಥವಾಗಿ ಜನತೆಯ ನಿರೀಕ್ಷೆಯಂತೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರ.

ಕಾರ್ಯಕರ್ತರ ಮುಖದಲ್ಲಿನ ಸಂತೋಷ ನೋಡಿದರೆ ಗೊತ್ತಾಗುತ್ತೆ. ಈಡೀ ದೇಶದಲ್ಲಿ ಇಂಡಿಯಾ ಒಕ್ಕೂಟ ಬಿಜೆಪಿ ವಿರುದ್ಧ ಬಿಂಬಿಸುವ ಪ್ರಯತ್ನ ಮಾಡಿದರು. ಚುನಾವಣೆಯ ಪಲಿತಾಂಶ ದೊಡ್ಡ ಶಕ್ತಿ ತಂದು ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಗೊಳ್ಳು ಭರವಸೆಗಳನ್ನು ಜನರು ನಂಬುತ್ತಿಲ್ಲ. ಲೋಕಸಬೆ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ.

ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಕಾಂಗ್ರೆಸ್ ಪಕ್ಷವನ್ನು ದೂಳಿಪಟ ಮಾಡಲಿದ್ದೇವೆ ಎಂದು ಭವಿಷ್ಯ ನುಡಿದರು.

Read More Articles