ಬೆಳಗಾವಿ: ಹೊನಗಾದಲ್ಲಿ ನಡೆದ ಶ್ರೀ ಜಗದ್ಗುರು ಮೌನೇಶ್ವರರ ೨೩ನೇ ವರ್ಷದ ಜಯಂತೋತ್ಸವ ಹಾಗೂ ಶ್ರೀಗಳ ಆಶೀರ್ವಚನ.
- Prasad Kambar
- 12 Jan 2024 , 9:56 PM
- Belagavi
- 668
ಬೆಳಗಾವಿ: ಹೊನಗಾದಲ್ಲಿ ನಡೆದ ಶ್ರೀ ಜಗದ್ಗುರು ಮೌನೇಶ್ವರ ೨೩ನೇ ವರ್ಷದ ಜಯಂತೋತ್ಸವದಲ್ಲಿ ಪಾಲ್ಗೊಂಡ ಗಣ್ಯರು ಶ್ರೀ ಕಾಳಪ್ಪ ಎಚ್ ಬಡಿಗೇರ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಶ್ರೀ ಚಂದ್ರಕಾಂತ್ ಸುತಾರ್ ಅವರು ಉಪಾಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಶ್ರೀ ಅಶೋಕ್ ಬಡಿಗೇರ್ ಅವರು ಕಾರ್ಯದರ್ಶಿಗಳ ಸ್ಥಾನವನ್ನು ವಹಿಸಿದ್ದರು.

ಬೆಳಗ್ಗೆ ೮:00 ಗಂಟೆಗೆ ಶ್ರೀ ವಿಶ್ವಕರ್ಮ ಧ್ವಜಾರೋಹಣವನ್ನು ನೆರವೆರಿಸಲಾಯಿತು. ನಂತರ ಶ್ರೀ ಗುರು ಮೌನೇಶ್ವರ ಭಾವಚಿತ್ರದೊಂದಿಗೆ ಬೆನ್ನಾಳಿ ದೇವಗಿರಿ ಹೊನಗಾದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಂತರ ಅಭಿಷೇಕ ಮತ್ತು ತೊಟ್ಟಿಲು ಪೂಜೆ, ಹೋಮ ಹವನ ಸಾಮೂಹಿಕ ಉಪನಯನ ಮತ್ತು ಪುರವಂತರ ಸೇವೆಯನ್ನು ನಡೆಸಲಾಯಿತು.
ದಿವ್ಯ ಸಾನಿಧ್ಯವನ್ನು ವಹಿಸಿದಂತ ಶ್ರೀ ಶ್ರೀ ಶ್ರೀ ಪ್ರಮೋದ್ ಮಹಾಸ್ವಾಮಿಗಳು ಶ್ರೀ ವಿಶ್ವಕರ್ಮ ಏಕದಂಡಿಗಿ ಮಠ, ಶ್ರೀ ಸರಸ್ವತಿ ಪೀಠಾಧೀಶ್ವರರು. ಶ್ರೀ ಶ್ರೀ ಶ್ರೀ ಪರಮಪೂಜ್ಯ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಭೂತರಾಮನಹಟ್ಟಿ. ಶ್ರೀ ಶ್ರೀ ಪರಮಪೂಜ್ಯ ರಾಚಯ್ಯ ಸ್ವಾಮಿಗಳು ಶಿವಪೂಜಾ ಮಠ ಕಾಕತಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಅಥಿತಿಗಳ ಸ್ಥಾನವನ್ನು ಅಲಂಕರಿಸಿದರು.










