ನಾಳೆ ನೂತನ ಶಾಲಾ ಕಟ್ಟಡದ ಭೂಮಿ ಪೂಜಾ ಸಮಾರಂಭಕ್ಕೆ ಚಾಲನೆ : ವಿಜಯ ಹುದ್ದಾರ
- shivaraj B
- 8 Aug 2024 , 2:33 PM
- Athani
- 669
ಅಥಣಿ : ಅಥಣಿ ಪಟ್ಟಣದ ಮದಭಾವಿ ರಸ್ತೆಗೆ ಹೊಂದಿಕೊಂಡಿರುವ ಹುದ್ದಾರ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡದ ಭೂಮಿ ಪೂಜಾ ಸಮಾರಂಭವನ್ನು ನಾಳೆ ದಿನಾಂಕ 09 ರಂದು ಅಥಣಿ ಶಾಸಕ ಲಕ್ಷ್ಮಣ ಸವದಿ, ಶೆಟ್ಟರಮಠದ ಮರುಳಸಿದ್ದ ಮಹಾಸ್ವಾಮೀಜಿ, ಕಾಡಯ್ಯ ಸ್ವಾಮೀಜಿ ಹಾಗೂ ಗಣ್ಯಮಾನ್ಯರು ಸೇರಿದಂತೆ ಅನೇಕರು ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಿಜಯ ಹುದ್ದಾರ ಅವರು ಹೇಳಿದರು.
ಅವರು ಹುದ್ದಾರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿ ಹೇಳಿದರು.
ಈ ವೇಳೆ ಶಿಕ್ಷಕ ಸಂಜಯ ಕುಲಕರ್ಣಿ, ಗ್ರಾ.ಪಂ ಸದಸ್ಯ ಪರಶುರಾಮ ಸೋನಕರ, ಐ ಕೆ ಕುಂಬಾರ ಅವರು ಮಾತನಾಡಿದರು, ಈ ವೇಳೆ ಶ್ರೀದೇವಿ ಜಾಧವ, ಪೂರ್ಣಿಮಾ ಹುದ್ದಾರ, ಸಂತೋಷ ಕಾಳೆಲಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ವರದಿ : ರಾಹುಲ್ ಮಾದರ











