ಅಲ್ಪಸಂಖ್ಯಾತ ಮುಸ್ಲಿಂರ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಸದಾ ಬದ್ದ : ಎಫ್.ಎಸ್.ಸಿದ್ದನಗೌಡರ
- Krishna Shinde
- 15 Jan 2024 , 3:26 AM
- Belagavi
- 190
ಬೆಳಗಾವಿ: ಅಲ್ಪಸಂಖ್ಯಾತ ಮುಸ್ಲಿಂರ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಬದ್ದವಾಗಿರುವದನ್ನು ಮತ್ತೊಮ್ಮೆ ಸಾರಿದೆ. ವಿದೇಶದ ವ್ಯಾಸಂಗಕ್ಕೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 20ಲಕ್ಷ ರೂ ಬಡ್ಡಿ ರಹಿತ ಸಾಲ, ಉದ್ಯಮಶಿಲತೆಗಾಗಿ 3ಕೋಟಿ, ವಕ್ತ್ ಅಸ್ತಿ ಸಂರಕ್ಷಣೆಗೆ 10 ಕೋಟಿ, ಅಭಿವೃದ್ಧಿ ನಿಗಮಕ್ಕೆ 110 ಕೋಟಿ , ಕಬರಸ್ತಾನ ಸುಧಾರಣೆ ಹೀಗೆ ಹತ್ತು ಹಲವಾರು ಅಭಿವೃದ್ಧಿ ಪರವಾದ ಯೋಜನೆ ಹಾಗೂ ಮುಸ್ಲಿಂರ ಶ್ರಯೋಭಿವೃದ್ಧಿಗೆ ಮಾಡಿರುವ ಘೋಷಣೆ ಹಾಗೂ ರೈತರಿಗೆ 5ಲಕ್ಷದ ವರೆಗೆ ಶೂನ್ಯ ಬಡ್ಡಿ ಯಲ್ಲಿ ಸಾಲ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಅಡುಗೆ ಸಾಹಯಕರ, ಅಂಗನವಾಡಿ ಕಾರ್ಯಕರ್ತರ, ಗ್ರಾಮ ಸಾಹಯಕರ ಗೌರವ ಧನ ಹೆಚ್ಚಿಸಿರುವದು,ಕೃಷಿಕರಿಗೆ ಜಲಹೊಂಡ ನಿರ್ಮಾಣ, ರೈತರ ಬೆಳೆಗಳ ಬೆಂಬಲ ಬೆಲೆ ಖರೀದಿಗೆ 3ಸಾವಿರದಾ 5 ನೂರು ಕೋಟಿ ರೂಪಾಯಿ ದಾಖಲೆಯ ಆವರ್ತ ನಿಧಿ ಘೋಷಣೆಗಳು ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ಈ ಬಜೆಟ್ ಸ್ವಾಗತಾರ್ಹವಾಗಿದೆ.

ಎಫ್.ಎಸ್.ಸಿದ್ದನಗೌಡರ.
ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ











