ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಬಿಜೆಪಿ ಹೈಕಮಾಂಡ್ ತೀವ್ರ ಆಕ್ರೋಶ
ನವದೆಹಲಿ:ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದರಾದ ಕಂಗನಾ ರಣಾವತ್ ಅವರು ರೈತ ಪ್ರತಿಭಟನೆ ಸಂಬಂಧ ಮಾಡಿದ ಹೇಳಿಕೆಗೆ ಪಕ್ಷದಿಂದ ಅಧಿಕೃತವಾಗಿ ಅಸಮ್ಮತಿ ವ್ಯಕ್ತಪಡಿಸಲಾಗಿದೆ.

ಬಿಜೆಪಿ ಕೇಂದ್ರ ಮೀಡಿಯಾ ವಿಭಾಗದ ಪ್ರಕಟಣೆಯ ಮೂಲಕ, ಕಂಗನಾ ರಣಾವತ್ ಅವರ ಹೇಳಿಕೆ ಪಕ್ಷದ ದೃಷ್ಟಿಕೋನವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬಿಜೆಪಿ ಅವರು ನೀಡಿದ ಹೇಳಿಕೆಯನ್ನು ಸ್ವೀಕರಿಸಲಿಲ್ಲ ಮತ್ತು ಕಂಗನಾ ರಣಾವತ್ ಅವರನ್ನು ಪಕ್ಷದ ನೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾತನಾಡಲು ಅನುಮತಿ ನೀಡಿಲ್ಲ. ಮುಂದೆ ಇಂತಹ ಯಾವುದೇ ಹೇಳಿಕೆ ನೀಡದಂತೆ ಅವರಿಗೆ ಸೂಚನೆ ನೀಡಲಾಗಿದೆ.
ಭಾರತೀಯ ಜನತಾ ಪಾರ್ಟಿ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ ಎಂಬ ತತ್ವದ ಮೇಲೆ ನಿಂತಿದ್ದು, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ಬದ್ಧವಾಗಿದೆ ಎಂದು ಪುನಃ ಒತ್ತಿ ಹೇಳಿದೆ.










