ಸರಕಾರದ ವಿರುದ್ಧ ಬಿಜೆಪಿ ರಣಕಹಳೆ
- shivaraj bandigi
- 14 Jan 2024 , 10:39 PM
- Belagavi
- 400
ಬೆಳಗಾವಿ :

ಜನ ವಿರೋಧಿ ಕಾಂಗ್ರೆಸ್ ಸರ್ಕಾರ ವಿರುದ್ದ ಬಿಜೆಪಿಯಿಂದ ಬೃಹತ ಹೋರಾಟ. ಬೆಳಗಾವಿ ಮಾಲಿನಿ ಸಿಟಿ ಮೈದಾನದಲ್ಲಿ ಆಯೋಜನೆ ಮಾಡಿದ ಬಿಜೆಪಿ ಸಮಾವೇಶ ನಡೆಯುತ್ತಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ ಭಾಷಣ ಆರಂಭಿಸಿದ್ದು, ಬರಗಾಲದ ಪರಿಹಾರ ಇನ್ನೂ ವರೆಗೂ ಯಾವ ರೈತನಿಗೂ ಬಂದಿಲ್ಲ. ಅಲ್ಪ ಸಂಖ್ಯಾತ ಬಂದುಗಳು ಸರ್ಕಾರಕ್ಕೆ ಒಂದು ರೂಪಾಯಿ ಕೂಡಾ ಕೇಳಿರಲಿಲ್ಲ. ಆದರೆ ಅಲ್ಪಸಂಖ್ಯಾತ ಬಂದುಗಳಿಗೆ 10 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ನಮ್ಮ ಮುಸಲ್ಮಾನ ಬಂದುಗಳಿಗೆ 10 ಸಾವಿರ ಕೋಟಿ ನೀಡಿದ್ದಾರೆ . ನಮ್ಮಗೆ ನಯಾ ಪೈಸೆ ಕೂಡಾ ನೀಡಿಲ್ಲಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಸಿದ್ದರಾಮಯ್ಯಗೆ ತಕ್ಕ ಪಾಠ ಕಲುಸಬೇಕಿದೆ. ಸರ್ಕಾರ ರೈತರ ಕೈ ಹಿಡಿಯಬೇಕಿತ್ತು, ಆದರೆ ಕೈ ಹಿಡದಿಲ್ಲ ಎಂದರು.
ಯಡಿಯೂರಪ್ಪ ಸರ್ಕಾರ ಇದ್ದಾಗ ರೈತರ ಖಾತೆಗೆ 10 ಸಾವಿರ ಬರುತಿತ್ತು. ಸದ್ಯ ರಾಜ್ಯ ಸರ್ಕಾರದಿಂದ ರೈತರಿಗೆ ಒಂದ ರೂಪಯಿ ಬರುತಿಲ್ಲ. ಕೇಂದ್ರದಿಂದ ಮಾತ್ರ 6 ಸಾವಿರ ರೈತರಿಗೆ ಬರುತ್ತಿದೆ. ಆದರೆ, ರಾಜ್ಯದಿಂದ ರೈತರಿಗೆ ಹಣ ಬರುತ್ತಿಲ್ಲ.ಕೇಂದ್ರದಿಂದ ಐದು ಕೆ.ಜಿ ಅಕ್ಕಿ ಬರುತ್ತಿದೆ. ಆದರೆ, ರಾಜ್ಯದಿಂದ ಒಂದ ಕೆಜಿನ್ನು ಬರುತ್ತಿಲ್ಲ.ಕಾಂಗ್ರೆಸ್ ಸರ್ಕಾರ 10 ಕೆ.ಜಿ ಕೊಡತ್ತೀನಿ ಅಂತಾ ಹೇಳಿದ್ದರು .ಎಲ್ಲಿ ಬರತ್ತೀದೆ ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿ.ಬೊರವೆಲ್‌ಗೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲಿಕ್ಕೆ 2 ರಿಂದ 3 ಲಕ್ಷ ಖರ್ಚು ಆಗುತ್ತೆ.ಆದರೆ, ಸಿದ್ದರಾಮಯ್ಯ 2 ರಿಂದ 3 ಲಕ್ಷ ರೈತರೆ ಬರಿಸಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ
ರೈತರ ಬೆನ್ನು ಮೂಳೆ ಮುರಿತುವಂತ ಸರ್ಕಾರ ಅದುವೇ ಕಾಂಗ್ರೆಸ್ ಸರ್ಕಾರ. ಯಡಿಯೂರಪ್ಪ ಅಂದರೆ ಮಳೆ ಬರುತ್ತೆ, ಸಿದ್ದರಾಮಯ್ಯ ಅಂದರೆ ಬರ ಅರುತ್ತೆ.ಯಡಿಯೂರಪ್ಪ ಅವರನ್ನ ಮತ್ತೆ ಅಧಿಕಾರಕ್ಕೆ ತರುತ್ತೆವೆ.ರೈತರಿಗೆ 10 ಸಾವಿರ ಕೋಟಿ ಅನುದಾನವನ್ನ ಈ ಚಳಿಗಾಲ ಅಧಿವೇಶನದಲ್ಲಿ ಘೋಷಣೆ ಮಾಡಿ ಇಲ್ಲ ಕುರ್ಚಿ ಖಾಲಿ ಮಾಡಿ.ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಎನ್ ರವಿಕುಮಾರ










