ಎಳೆಬೈಲ್, ಸುಳಗಾದ ಹಲವಾರು ಬಿಜೆಪಿ ಪ್ರಮುಖರು ಕಾಂಗ್ರೆಸ್ ಪಕ್ಷಕ್ಕೆ

ಬೆಳಗಾವಿ :ಎಳೆಬೈಲ್ ಹಾಗೂ ಸುಳಗಾ ಗ್ರಾಮದ ಹಲವಾರು ಮುಖಂಡರು ಸೋಮವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

promotions

ಸುಳಗಾ (ವೈ) ಗ್ರಾಮದ ಜನಾಬ ಕುಕಡೋಳ್ಕರ್, ಬಾಹು ಬೆನಕೆ, ಪರುಶರಾಮ ನಾವಗೇಕರ್, ಮಾರುತಿ ಸುಳಗೇಕರ್, ಯಲ್ಲಪ್ಪ ನಾವಗೇಕರ್, ದುರ್ಗಪ್ಪ ಸುಳಗೇಕರ್, ಪ್ರಭಾಕರ್ ಪಾಟೀಲ, ಮಲ್ಲಪ್ಪ ನಾವಗೇಕರ್ ಸೇರಿದಂತೆ ಹಲವಾರು ಬಿಜೆಪಿಯ ಮುಖಂಡರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

promotions

ಎಳೇಬೈಲ್ ಗ್ರಾಮದ ಜೆಡಿಎಸ್ ಹಾಗೂ ಬಿಜೆಪಿಯ ಅನೇಕರು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಗ್ರಾಮ ಮಂಡಳ ಚೇರಮನ್ ಗುಂಡು ಪಾಟೀಲ , ಭರ್ಮಾ ಕೆ ಪಾಟೀಲ, ನಾಮದೇವ ಮರಗಾಳೆ, ನಿಂಗಪ್ಪ ಪಾಟೀಲ, ಕಲ್ಲಪ್ಪ ಪಾಟೀಲ, ಉಮಾಣಿ ಯಳ್ಳೂರಕರ್, ರವಳು ಪಾಟೀಲ, ಭರ್ಮಾ ಶಹಾಪೂರಕರ್, ರಾಜು ಯಳ್ಳೂರಕರ್, ಮಲ್ಲಪ್ಪ ಪಾಟೀಲ, ಜ್ಯೋತಿಬಾ ಪಾಟೀಲ, ಮೋನಪ್ಪ ಮರಗಾಳೆ, ಲಕ್ಷ್ಮಣ ಶಹಾಪೂರಕರ್ ಸೇರಿದಂತೆ ಹಲವಾರು ಮುಖಂಡರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿಜಗರಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ ಬೆಳಗಾಂವ್ಕರ್, ಸದಸ್ಯರಾದ ಮಹೇಶ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Read More Articles