ಬೆಳಗಾವಿಯಲ್ಲಿ ಬಿಜೆಪಿ ಅಬ್ಬರ : ಕೇಸರಿಮಯವಾಗಿ ಸಿಂಗಾರಗೊಂಡ ಕುಂದಾನಗರಿ

ಬೆಳಗಾವಿ: 27ನೇ ಫೆಬ್ರುವರಿ 2023 ರಂದು ಪ್ರಧಾನಿ ಮೋದಿ ಯವರ ಆಗಮನ ಬೆಳಗಾವಿ ಬಿಜೆಪಿ ಮತ್ತು ಬೆಳಗಾವಿ ಮಹಾಜನತೆಯಲ್ಲಿ ಹೊಸ ಚೈತನ್ಯ ತುಂಬಿದಂತಾಗಿದೆ.

promotions

ಬೆಳಗಾವಿಯ ಪ್ರಮುಖ ಸ್ಥಳಗಳಾದ ಚೆನ್ನಮ್ಮ ವೃತ್ತ ,ಕಾಲೇಜ ರೋಡ ,ರೈಲ್ವೆ  ಸ್ಟೇಷನ ಕೇಸರಿ  ಮಯವಾಗಿ ಕಂಗೊಳಿಸ್ಸುತ್ತಿವೆ ಮತ್ತು ಪ್ರಧಾನಿ ಮೋದಿಯವರ 8 ಕಿ.ಮೀ ರೋಡ ಶೋ ಇಡೀ ಭಾರತ ಬೆಳಗಾವಿಯತ್ತ ಮುಖ ಮಾಡುವಂತೆ ಮಾಡಿದೆ.

promotions

ಹಲವು ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಲು ಬರುತ್ತಿರುವ ಪ್ರಧಾನಿ ಮೋದಿ ಬೆಳಗಾವಿಯ ರೈಲು ನಿಲ್ದಾಣ , ಜಲಜೀವನ್ ಮಿಷನ್ , ರೈಲು ಮಾರ್ಗ ಡಬಲಿಂಗ ,ಕಿಸಾನ ಸಮ್ಮಾನ್ ಯೋಜನೆ ಮುಂತಾದ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಶಿವಮೊಗ್ಗ ಮತ್ತು  ಬೆಳಗಾವಿಗೆ  ಭೇಟಿನೀಡಲಿರುವ ಪ್ರಧಾನಿ ಮೋದಿ ನಾಳೆ ಅಂದರೆ feb 27 ಸುಮಾರು 2ಗಂಟೆಗೆ ಬೆಳಗಾವಿಯ ksrp ಹೆಲಿಪ್ಯಾಡ್ ನಿಂದ ಬೆಳಗಾವಿಯಲ್ಲಿ 8ಪಾಯಿಂಟಗಳಲ್ಲಿ  ರೋಡ್ ಶೋ ಮಾಡುವ ಮೂಲಕ  ಪ್ರಧಾನಿ ಮೋದಿ ಸಂಚಲನ ಮೂಡಿಸಲಿದ್ದಾರೆ. 

ಮದ್ಯಹನ 3ಗಂಟೆಗೆ ಪ್ರಾರಂಭವಾಗಲಿರುವ ಕ್ರಾಯಕ್ರಮದಲ್ಲಿ  
ಬಿಸವೈ ,ಶೋಭಾ ಕರಂದ್ಲಾಜೆ ,ಅಭಯ ಪಾಟೀಲ್ ಮುಂತಾದವರು ಭಾಗಿಯಾಗಲಿದ್ದಾರೆ.


ಈ ಕಾರ್ಯಕ್ರಮದಲ್ಲಿ 1ಲಕ್ಷ ಜನ ಕೂಡುವ ವ್ಯವಸ್ಥೆ ಇದ್ದು ಊಟದ ವ್ಯವಸ್ಥೆ ಕೂಡ ಇದೆ.

ಬೆಳಗಾವಿ ಮಹಾನಗರಕ್ಕೆ ಇನ್ನಾದರೂ ಹೊಸ ಪ್ರಾಜೆಕ್ಟ್ಸ್  ,IT ಪಾರ್ಕ್ ಮಾನ್ಯತೆ ಸಿಗುವುದಾ ಅಥವಾ ಇದು ಬರಿ ಪಾಲಿಟಿಕ್ಸ್ ಅಜೆಂಡಾ ಆಗುತ್ತಾ ಅಂತ ಕಾದು ನೋಡೋಣ.

video By: Prasad K

Read More Articles