ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚಾವತಾರ: ಸಿಡಿದೆದ್ದ ರೈತರು

ಅಥಣಿ :ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚಾವತಾರ ಕಂಡು ಬಂದಿದ್ದು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ  ರೈತರು ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

promotions

ಅಥಣಿ ಸಬ್ ರಿಜಿಸ್ಟ್ರಾರ್ ಕಲಾವತಿ ಮಾಲವಾಡಿಯನ್ನು ತರಾಟೆ ತೆಗೆದುಕೊಂಡ ರೈತ ಮುಖಂಡರು,ಪ್ರತಿಯೊಂದು ನೋಂದಣಿಗೆ ಹೆಚ್ಚುವರಿಯಾಗಿ 15 ಸಾವಿರ ರೂ. ಅಧಿಕಾರಿಗೆ ಶುಲ್ಕ ಪಾವತಿ ಮಾಡಬೇಕೆಂಬ ಆರೋಪ ಮಾಡಿದ್ದಾರೆ.

promotions

ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿಯಿಂದ ಬೇಸತ್ತ ರೈತರು ವ್ಯವಸ್ಥೆ ಸರಿ ಹೊಂದದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು  ರೈತ ಮುಖಂಡ ಮಹದೇವ ಮಡಿವಾಳ ನೀಡಿದ್ದಾರೆ.

 

Read More Articles