ರಾಖಿ ಕಟ್ಟಿಸಿಕೊಳ್ಳಲು ಮುಗಿಬಿದ್ದ ಸಹೋದರರು; ಸಾಗರೋಪಾದಿಯಲ್ಲಿ ಬಂದ ಜನರಿಗೆ ರಾಖಿ ಕಟ್ಟಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
- 15 Jan 2024 , 12:32 AM
- Belagavi
- 95
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಮನೆಯಲ್ಲಿ ಗುರುವಾರ ಜನಜಾತ್ರೆಯೇ ಸೇರಿತ್ತು. ರಕ್ಷಾ ಬಂಧನದ ನಿಮಿತ್ತ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ರಾಖಿ ಕಟ್ಟಿಸಿಕೊಳ್ಳಲು ಕ್ಷೇತ್ರದ ಜನರು ಸಾಗರೋಪಾದಿಯಲ್ಲಿ ಆಗಮಿಸಿದ್ದರು.

ಬೆಳಗ್ಗೆ 8 ಗಂಟೆಯಿಂದಲೇ ಮನೆಯ ಮುಂದೆ ಸರತಿ ಸಾಲಿನಲ್ಲಿ ನಿಂತ ಜನರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ರಾಖಿ ಕಟ್ಟಿ ರಕ್ಷೆಯ ಭರವಸೆ ಪಡೆದರು. ಮಧ್ಯಾಹ್ನ 1 ಗಂಟೆಯಾದರೂ ಸರತಿ ಸಾಲು ಮುಂದುವರಿದಿತ್ತು. ಜನರು ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ರಕ್ಷಣೆಯ ಜವಾಬ್ದಾರಿ ಎನ್ನುವ ಸಂದೇಶ ಸಾರುತ್ತಿದ್ದರು.

ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ ಹಲವು ವರ್ಷಗಳಿಂದ ರಕ್ಷಾಬಂಧನ ಕಾರ್ಯಕ್ರಮ ಮಾಡುತ್ತ ಬಂದಿದ್ದಾರೆ. ಆದರೆ ಈ ಬಾರಿಯ ಜನಸ್ತೋಮ, ಸಾಗರೋಪಾದಿಯಲ್ಲಿ ಜನ ಬರುತ್ತಿದ್ದ ರೀತಿ ಎಂತವರೂ ಆಶ್ಚರ್ಯಚಕಿತರಾಗುವಂತೆ ಮಾಡಿದೆ. ಪಕ್ಷ ಬೇಧ ಮರೆತು ಜನರು ಆಗಮಿಸಿದ್ದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಮತ್ತು ಅವರ ಪತ್ನಿ ಡಾ.ಹಿತಾ ಸೇರಿದಂತೆ ಕುಟುಂಬಸ್ಥರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಂದವರಿಗೆಲ್ಲ ಸಹಿ ಹಾಗೂ ಅಲ್ಪೋಪಹಾರ ವ್ಯವಸ್ಥೆ ಮಾಡಲಾಗಿತ್ತು.










