ಪರಿಸರದ ಕಾಳಜಿಯೇ ಮೊದಲ ಆದ್ಯತೆ ವಾಗಲಿ : ಪ್ರವೀಣ್ ಹಿರೇಮಠ
- Krishna Shinde
- 14 Jan 2024 , 9:53 PM
- Belagavi
- 179
ಬೆಳಗಾವಿ : ಜೂನ್ 5 ವಿಶ್ವದ್ಯಾಂತ ಪರಿಸರ ದಿನಾಚರಣೆ ಆಚರಿಸಲಾಗುತಿದ್ದು ಪ್ರತಿ ಯುವಜನತೆ ಮತ್ತು ಹಿರಿಯರು ಪರಿಸರದ ಬಗ್ಗೆ ವಿಶೇಷ ಪೋಸ್ಟಗಳ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಪ್ರತಿ ನಾಗರಿಕರಲ್ಲಿ ಕಾಳಜಿ ಮೂಡುಸುತಿದ್ದಾರೆ.

ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿರುವ ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದ ಪ್ರವೀಣ ಹಿರೇಮಠ 1972 ಜೂನ 5ನ್ನು ಪರಿಸರದ ಕಾಳಜಿ ಹಾಗು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ವಿಶ್ವ ಪರಿಸರ ದಿನ ಎಂದು ವಿಶ್ವಸಂಸ್ಥೆ ಘೋಷಿಸಿತು ಎಂದು ಹೇಳಿದ್ದಾರೆ.

ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು , ಪರಿಸರದಲ್ಲಿ ಉಂಟಾಗುತ್ತಿರುವ ವಿಕೋಪಗಳು ಮತ್ತು ಆಗು ಹೋಗುಗಳು ಈಗಾಗಲೇ ನಾವು ನೋಡುತ್ತಿದ್ದೇವೆ ಆದ್ದರಿಂದ ಈಗಲೇ ಎಚ್ಚೆತ್ತು ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಲೆ ಬೇಕು ಎಂದು ಪ್ರವೀಣ್ ಹೇಳಿದ್ದಾರೆ.
ನಮ್ಮ ಹಿರಿಯರು ಮೊದಲು ಪರಿಸರಕ್ಕೆ ಕೊಡುತಿದ್ದ ಆದ್ಯತೆ ಈಗಿನ ಪೀಳಿಗೆ ಏನು ಕೊಡುತ್ತಿಲ್ಲ ಅದು ವಿಕೋಪಕ್ಕೆ ತುಳಿರುಗುತ್ತಿದೆ ಎಂಬುದು ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ ಎಂದು ಪ್ರವೀಣ್ ಹೇಳಿದ್ದಾರೆ.
ಕಾಲಕ್ರಮೇಣ ಆಗಬೇಕಾದ ಮಳೆಗಾಲ ,ಬೇಸಿಗೆಕಾಲ ಮತ್ತು ಚಳಿಗಾಲವಾಗದೆ ಇರುವುದಕ್ಕೆ ಮಾನವ ಕಾಡುಗಳನ್ನು ನಾಶ ಮಾಡಿ ಇರೋ ಗಿಡ ಮರಗಳನ್ನು ಕಡಿಯುತ್ತಿರುವುದು ಎಂದು ಹೇಳಿದ್ದಾರೆ.
30,40,50 ವರ್ಷದ ಮರಗಳನ್ನು ಐದೇ ನಿಮಿಷದಲ್ಲಿ ನೆಲಸಮ ಮಾಡುತ್ತಿರುವ ನಾವು ಸ್ವಾರ್ಥಕ್ಕಾಗಿ ನಾವು ಕಾಡನ್ನ ನಾಶ ಮಾಡುತ್ತಿದ್ದೇವೆ ಎಂದು ಪ್ರವೀಣ್ ಹೇಳಿದ್ದಾರೆ.
ಆದ್ದರಿಂದ ಗಿಡ ಮರಗಳನ್ನು ನೆಟ್ಟು ಅವುಗಳನ್ನು ಬೆಳೆಸೇವುದು ನಮ್ಮ ಆದ್ಯ ಕರ್ತವ್ಯವಾಗಲಿ ಎಂದು ಪ್ರವೀಣ್ ಹಿರೇಮಠ ಕೇಳಿಕೊಂಡಿದ್ದಾರೆ.










