ಚಿಟಾಪಟಾ ಚಿಟಾಪಟಾ ಅಂತ ಹಿಡಕೊಂತಾ ಮಳೆಯೂ ಹಿಡಕೊಂತಾ
- shivaraj B
- 23 Aug 2024 , 11:17 PM
- Belagavi
- 288
ಬೆಳಗಾವಿ : ತೋಯ್ದರೂ ತೋಯದು ಚಿಟಾಪಟಾ ಅಂತ ಸುರಿಯುತ್ತಿರುವ ಮಳಗೆ ಜನ ಕಂಗಾಲಾಗಿದ್ದಾರೆ.

ಬೆಳಗಾವಿಯಲ್ಲಿ ಸುರಿಯುತ್ತಿರುವ ಮಳೆಗೆ ಜನರು ಬೆಚ್ಚಿಬಿದ್ದಿದ್ದು, ಜೋರಾಗಿ ಬರದೆ ಚಿಟಾಪಟ ಅಂತ ಮಳಗೆ ದ್ವಿಚಕ್ರ ವಾಹನ ಸವಾರರು ಒದ್ದೆಯಾಗಿ ಮನೆ ಸೇರುವ ಪರಿಸ್ಥಿತಿ ಬೆಳಗಾವಿಯವರದ್ದು ಆಗಿದೆ.

ಸಂಜೆಯಿಂದ ಸುಖಾಸುಮ್ಮನೆ ಜಿಟಿಜಿಟಿಯಾಗಿ ಮಳೆ ಬೀಳೂತ್ತಿದ್ದರೂ ಯಾವುದೇ ಅವಾಂತರ ಸೃಷ್ಟಿಯಾಗದಿರಲಿ ಅಂತ ಜನರು ವರುಣ ದೇವನಿಗೆ ಮೊರೆ ಹೋಗುತ್ತಿದ್ದಾರೆ.
ವಾಡಿಕೆಗಿಂತ ಹೆಚ್ಚಾದ ಮಳೆಗೆ ಕಂಗಾಲಾಗಿರುವ ಜನರು, ಸಿಟಿಸಿಟಿ ನೀರಿಗೂ ಅಂಜುವ ಪ್ರಮೇಯ ಎದುರಾಗಿದೆ.
ವರದಿ : ರವಿಕಿರಣ್ ಯಾತಗೇರಿ










