ದಾಖಲೆ ಇಲ್ಲದ 2 ಕೋಟಿಗೂ ಅಧಿಕ ಹಣ ಸೀಜ್ ಮಾಡಿದ ಸಿಸಿಬಿ ಪೊಲೀಸರು

ಬೆಳಗಾವಿ : ಮಹಾರಾಷ್ಟ್ರದ ಸಾಂಗಲಿಯಿಂದ ಹುಬ್ಬಳ್ಳಿ ಕಡೆಗೆ ಅಶೋಕ ಲೆಯಲ್ಯಾಂಡ್ ದೋಸ್ತ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಹಣವನ್ನು ಸಾಗಣೆ ಕುರಿತು ಖಚಿತ ಮಾಹಿತಿ ಪಡೆದು ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು(ಕಾ&ಸು) ಹಾಗೂಉಪ ಪೊಲೀಸ್ ಆಯುಕ್ತರು(ಅ&ಸಂ) ಬೆಳಗಾವಿ ನಗರ ರವರ ಮಾಗದರ್ಶನದಲ್ಲಿ ನಗರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ವರ ಕುಂಬಾರ ಹಾಗೂ ಅವರ ತಂಡ ದಿ: 18 ರಂದು ಸಾಯಂಕಾಲ ಸದರಿ ವಾಹನವನ್ನು ವಶಕ್ಕೆ ಪಡೆದು, ಹಣ ಸಾಗಾಣೆ ಮಾಡುತ್ತಿದ್ದ ಸಚಿನ ಮೇನಕುದಳಿ, ಸಾ: ಸಾಂಗಲಿ, ಮಹಾರಾಷ್ಟ್ರ ಹಾಗೂ ಮಾರುತಿ ಮಾರಗುಡೆ, ಸಾ: ಸಾಂಗಲಿ, ಮಹಾರಾಷ್ಟ್ರ ಇವರನ್ನು ಹಾಗೂ ಸದರಿಯವರಿಂದ ಒಟ್ಟು ನಗದು ಹಣ ರೂ. 2,73,27,500/- ಗಳನ್ನು ವಶಪಡಿಸಿಕೊಂಡಿದ್ದು, ಸದರಿ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಾಣೆ ಮಾಡಲು ವಾಹನದ ಕ್ಯಾಬಿನ್‌ನಲ್ಲಿ ಮಾರ್ಪಾಡು ಮಾಡಿದ್ದು ಕಂಡು ಬಂದಿದ್ದು, ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಪ್ತಾದ ಹಣದ ಬಗ್ಗೆ ಕುಲಂಕೂಶವಾದ ತನಿಖೆ ನಡೆಸುತ್ತಿದ್ದಾರೆ.

promotions

promotions

Read More Articles