ಚಂದ್ರು ಸಾವಿನ ಪ್ರಕರಣ ತನಿಖೆ‌ ಚುರುಕುಗೊಂಡಿದೆ: ಸಚಿವ ಜ್ಞಾನೇಂದ್ರ

ಬೆಳಗಾವಿ :ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪುತ್ರ ಚಂದ್ರಶೇಖರ ಸಾವಿನ ತನಿಖೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ್ ಜ್ಞಾನೇಂದ್ರ ಹೇಳಿದರು.

promotions

ಶುಕ್ರವಾರ ಸುವರ್ಣ ವಿಧಾನಸೌಧ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರೇಣುಕಾಚಾರ್ಯ ಸೇರಿದಂತೆ ಅವರ ಕುಟುಂಬಸ್ಥರು ಇದು ಸಾವಲ್ಲ ಕೊಲೆ ಎಂದು ಹೇಳುತ್ತಿದ್ದಾರೆ. ಈ ಕುರಿತು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

promotions

ಕೆಂಪೇಗೌಡರ 108ಅಡಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ‌ಮೋದಿ ಲೋಕಾರ್ಪಣೆ ಮಾಡಲಾಗುತ್ತಿದೆ. ನಾಡಿನಲ್ಲಿ ಕೀರ್ತಿ ತಂದ ಮಹನಿಯರಾದ ಚೆನ್ನಮ್ಮ, ಬಸವಣ್ಣ, ಕೃಷ್ಣ ದೇವರಾಯನ ಸ್ಥಳದಿಂದ ಮಣ್ಣನ್ನು ತರಬೇಕೆಂದು ಹೇಳಿ ಎಲ್ಲರನ್ನೂ ಒಟ್ಟಿಗೆ ಸೇರಿಸಬೇಕೆಂದು ಎಲ್ಲರೂ ಮೂರ್ನಾಲ್ಕು ಕಡೆಯಿಂದ ಮೃತ್ತಿಕೆ ತರುತ್ತಿದ್ದೇವೆ ಎಂದರು.

Read More Articles