ಬೆಳಗಾವಿಯಲ್ಲಿ ರಾಮನಾಮ ಜಪ
- shivaraj bandigi
- 22 Jan 2024 , 1:27 PM
- Belagavi
- 467
ಬೆಳಗಾವಿ :

ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ರಾಮ ಭಕ್ತರು ಸೋಮವಾರ ಸಂಭ್ರಮದಿಂದ ರಾಮನ ಪ್ರತಿಕೃತಿ ನಿರ್ಮಿಸಿ ಕುಣಿದು ಕುಪ್ಪಳಿಸಿದರು.

ನಗರದ ಗಣಪತಿಗಲ್ಲಿ, ಶನಿ ಮಂದಿರ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನ, ಮಹಾಪ್ರಸಾದ ವಿತರಿಸಿದರು. ನಗರದ ಎಲ್ಲ ಕಡೆಗಳಲ್ಲಿ ಜೈ ಶ್ರೀರಾಮ, ಜೈ ಹನುಮಾನ ಘೋಷಣೆ ಕೂಗಿ ಸಂಭ್ರಮ ಪಟ್ಟರು.
ರಂಗೋಲಿಯಲ್ಲಿ ಅರಳಿದ ಶ್ರೀರಾಮ,ಲಕ್ಷ್ಮಣ ಸೀತಾಮಾತೆ, ಭವ್ಯ ಅಯೋಧ್ಯೆಯ ರಾಮ ಮಂದಿರದ ಚಿತ್ರ. ಕಣ್ಮನ ಸೆಳಡಯುತ್ತಿದೆ ರಂಗೋಲಿ ಕಲಾವಿದರ ಕೈಯಲ್ಲಿ ಅರಳಿದ ರಾಮನ ಚಿತ್ರ. ಬೆಳಗಾವಿ ಕಪಿಲೇಶ್ವರ ಮಂದಿರಲ್ಲಿ ಮೂವರು ರಂಗೋಲಿ ಕಲಾವಿದರ ಕೈಕುಂಚದಲ್ಲಿ ಅರಳಿದ ಚಿತ್ರವನ್ನು ಸತತ ಮೂರು ದಿನಗಳ ಕಾಲ ಶ್ರಮಿಸಿ ರಾಮನ ಮೂರ್ತಿ ಬಿಡಿಸಿದ ಕಲಾವಿದರು.
ಬೆಳಗಾವಿ ಮೂಲದ ರಂಗೋಲಿ ಕಲಾವಿದರಾದ ಸಾತ್ವಿಕ, ದಿವ್ಯಾ ಕಂಗ್ರಾಳ್ಕರ್, ಸ್ವಾತಿ ಕಣಬರಕರ್ ಎಂಬುವವರಿಂದ ರಾಮನ ಚಿತ್ರ ಮತ್ತೊಂದಡೆ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಕುಂದಾನಗರಿ ಬೆಳಗಾವಿಯಲ್ಲಿ ಮನೆಮಾಡಿದ ಸಂಭ್ರಮ ವ್ಯಕ್ತಪಡಿಸಿದರು.ರಾಮಭಕ್ತ ಮಹಿಳೆಯರು, ಮಕ್ಕಳಿಂದ ಕಪಿಲೇಶ್ವರ ದೇವಸ್ಥಾನದಲ್ಲಿ ಮೊಳಗಿದ ರಾಮನ ಜಯಘೋಷ ಮೊಳಗಿತು.










