ಕೊಲೆಯಾದವಳ ಚಾರಿತ್ರ್ಯ ವದೆ. ಕೊಲೆ ಮಾಡಿದವನ ಮನೆಗೆ ಸರ್ಕಾರದ ರಕ್ಷಣೆ

ಬೈಲಹೊಂಗಲ- ಒತ್ತಾಯದ ಪ್ರೇಮಕ್ಕೆ ಬಲಿಯಾದ ನೇಹಾಳ ಸಾವಿಗೆ ಸಿಗುವದೇ ನ್ಯಾಯ? 

promotions

ನಿನ್ನೆ ಹುಬ್ಬಳ್ಳಿಯ ಕಾಲೇಜಿನಲ್ಲಿ ಹತ್ಯೆಯಾದ ನೇಹಾಳ ಸಾವಿಗೆ ಸರ್ಕಾರದ ಪ್ರತಿಯೊಬ್ಬರೂ ಒಂದೊಂದು ಕಾರಣ ನೀಡುತ್ತಿದ್ದಾರೆ ಎಂದು ಆರೋಪಿಸಿದ ಹಿಂದೂಪರ ಸಂಘಟನೆಗಳು, ಪಟ್ಟಣದಲ್ಲಿ ಬೃಹತ ಪ್ರತಿಭಟನೆ ನಡೆಸಿ ಕೊಲೆಗಡುಕನಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

promotions

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ಕಾಲಹರಣ ಮಾಡದೇ ಆರೋಪಿಗೆ ಎನಕೌಂಟರ ಮಾಡಲು ಸರ್ಕಾರ ಆದೇಶ ನೀಡಬೇಕು. ಕೊಲೆಯ ಕುರಿತು ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳ ಹೇಳಿಕೆ ನೋಡಿದರೆ ಕೊಲೆ ಆರೋಪಿಯ ರಕ್ಷಣೆ ಮಾಡುವಂತಿದೆ. ಅಮಾಯಕ ಮಗುವಿನ ಕೊಲೆ ಮಾಡಿ ಹೇಯ ಕೃತ್ಯ ಎಸಗಿರುವ ಆರೋಪಿಯ ಕುಟುಂಬವನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಕೊಲೆಯಾದ ಮಗುವಿನ‌ ಮನೆಯ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ ಕೊಲೆಗಡುಕನ ಮನೆಗೆ ರಕ್ಷಣೆ ನೀಡಿದೆ. ಒಂದು ಹೆಣ್ಣುಮಗುವಿನ ಶಾಪ ಸರ್ಕಾರಕ್ಕೆ ತಟ್ಟದೆ ಇರದು ಕೂಡಲೇ ಆರೋಪಿಯ ವಿರುದ್ದ ಕಠಿಣ ಕ್ರಮ ಜರುಗಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.

ವರದಿ : ರವಿಕಿರಣ್   ಯಾತಗೇರಿ 

Read More Articles