ಪೊಲೀಸ, ಅರಣ್ಯ ಇಲಾಖೆಯ ಜತೆ ಚಿರತೆ ಕಾರ್ಯಾಚರಣೆ
- 17 Dec 2023 , 11:18 PM
- Belagavi
- 179
ಬೆಳಗಾವಿ: ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಕೆ ಮತ್ತು ನಗರ ಪೊಲೀಸರು ಸೇರಿಕೊಂಡು ಕಾರ್ಯಾಚರಣೆ ನಡೆಸಿದರು. ಚಿರತೆ ಮಾತ್ರ ಕಾಣಿಸಲಿಲ್ಲ. ಸುಮಾರು 200 ಜನರು ಸಿಬ್ಬಂದಿಗಳು ಸೇರಿಕೊಂಡು ನಗರದ ಗಾಲ್ಪ ಕೋಸ್೯ ಬಳಿ ಸುಮಾರು 3 ಗಂಟೆಗಳ ಕಾಲ ಎಸಿಎಫ್ ಮಲ್ಲಿನಾಥ ಕುಸನಾಳ ಹಾಗೂ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು.

ಚಿರತೆ ಪ್ರತ್ಯೇಕವಾಗಿ 15 ದಿನದ ಹಿಂದೆ ಜಾಧವ ನಗರದಲ್ಲಿ ಕಾರ್ಮಿಕನ ಮೇಲೆ ದಾಳಿ ಮಾಡಿ ಯಾರಿಗೂ ಕಾಣದಂತೆ ಕಾಣೆಯಾಗಿತ್ತು. ಇಂದು ಕಾರ್ಯಾಚರಣೆ ನಡೆಸಿದರು ಚಿರತೆ ಸಿಗಲಿಲ್ಲ. ಜನರ ಭಯವನ್ನು ದೂರ ಮಾಡಲು ಕಾರ್ಯಾಚರಣೆ ಮಾಡಲಾಯಿತು. ಆದರೂ ಚಿರತೆ ಸೆರೆ ಹಿಡಿಯುವ ವರೆಗೆ ಗಾಲ್ಫ್ ಕೋಸ್೯ ಬಳಿ ಸಿಬ್ಬಂದಿ ನಿಯೋಜಿಸಲಾಗಿದೆ.











