
ಅನಿಲ ಬಡಚಿರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ
- shivaraj bandigi
- 14 Jun 2024 , 1:56 PM
- Athani
- 3147
ಅಥಣಿ:- ವಿಪತ್ತುಗಳಂತ ತುರ್ತು ಸಂದರ್ಭದಲ್ಲಿ ಅತ್ಯುತ್ತಮ ಸೇವೆಗಾಗಿ ಅಥಣಿ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಅನಿಲ ಬಡಚಿರವರಿಗೆ ಮುಖ್ಯ ಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಅಗ್ನಿ ಅವಗಡ ಮತ್ತು ವಿಪತ್ತುಗಳಂತ ತುರ್ತು ಸೇವೆಗಳ ಸಂದರ್ಭದಲ್ಲಿ ನಾಗರಿಕರ ಜೀವ ರಕ್ಷಣೆ ಹಾಗೂ ಆಸ್ತಿ ಸಂರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಅತ್ಯುತ್ತಮ ಸೇವೆ ಸಲ್ಲಿಸಿದ ಅಗ್ನಿಶಾಮಕ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿ ಗಳಿಗೆ ಮುಖ್ಯ ಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಲಾಗಿರುತ್ತದೆ. ಮಂಗಳವಾರ ಬೆಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿಲ ಬಡಚಿ ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಸನ್ಮಾನಿಸಿದರು.

ವರದಿ : ರಾಹುಲ್ ಮಾದರ
