ನಾಯಿ ಕಡಿತದಿಂದ ಮಗು ಸಾವು : ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಆರ್ಥಿಕ ನೆರವು
- Shivaraj Bandigi
- 15 Jan 2024 , 5:37 AM
- Belagavi
- 370
ಬೆಳಗಾವಿ: ನಾಯಿ ಕಡಿತದಿಂದ ಮೃತಪಟ್ಟ ಖಾನಾಪುರ ತಾಲೂಕಿನ ಗೋಧೋಳಿ ಗ್ರಾಮದ ಬಾಲಕಿಯ ಕುಟುಂಬಕ್ಕೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಆರ್ಥಿಕ ನೆರವು ನೀಡಿದರು.

ನಾರಾಯಣ ಕದಮ್ ಅವರ 5 ವರ್ಷದ ಮಗಳು ಮನೆ ಕಟ್ಟೆಯ ಮೇಲೆ ಆಟ ಆಡುವ ಸಮಯದಲ್ಲಿ ನಾಯಿ ಕತ್ತಿನ ಭಾಗಕ್ಕೆ ಬಲವಾಗಿ ಕಚ್ಚಿರುವ ಕಾರಣ ಮಗುವಿನ ಮೆದುಳಿಗೆ ಇನ್ಫೆಕ್ಷನ್ ಆಗಿ ಯಾವುದೇ ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ.

ಆ ಮಗುವಿನ ತಂದೆ, ತಾಯಿಗೆ ಸಾಂತ್ವನವನ್ನು ಹೇಳಿ, ಧೈರ್ಯ ತುಂಬಿದ ಲಕ್ಷ್ಮೀ ಹೆಬ್ಬಾಳಕರ್, ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ 50 ಸಾವಿರ ರೂ. ಚೆಕ್ ನೀಡಿದರು.
ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.










