ಸಿದ್ಧೇಶ್ವರ ಶಾಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

ಬೆಳಗಾವಿ: ಇಂದಿನ  ಮಕ್ಕಳೇ   ನಾಳಿನ ಒಳ್ಳೆಯ ಸದೃಢ ಪ್ರಜೆಗಳಾಗಲು  ಮಕ್ಕಳ ಮಾನಸಿಕ ಆರೋಗ್ಯವೇ ಬುನಾದಿ ಆಗಿರುತ್ತದೆ.ಆದ ಕಾರಣ  ಅರುಣೋದಯ ಫೌಂಡೇಶನ್  ಮತ್ತು ಅಸ್ಥಿತ್ವ ಪ್ರೊಫ ಷನಲ್ ಸೋಶಿಯಲ್ ವರ್ಕ್ ಆಫ್  ಅಸೋಸಿಯೇಷನ್  ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮನೋವೈದ್ಯಕೀಯ ವಿಭಾಗ  ಕೆ. ಎಲ್.ಇ. ಹಾಸ್ಪಿಟಲ್. ಮತ್ತು ಎಂ ಆರ್ ಸಿ ಬೆಳಗಾವಿ.  ಸಿದ್ದೇಶ್ವರ ಪ್ರೌಢಶಾಲೆ  ಹಾಗೂ  ಎಸ್ ಎಸ್ ಆರ್ ಡಿ  ಪ್ರೌಢಶಾಲೆ ಕಣಬುರ್ಗಿ  ಇವರ ಸಂಯೋಜನೊಂದಿಗೆ ಮಕ್ಕಳ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್ರಮವನ್ನು ಸಿದ್ದೇಶ್ವರ ಪ್ರೌಢಶಾಲೆ ಕಣಬರಗಿಯಲ್ಲಿ   ಹಮ್ಮಿಕೊಳ್ಳಲಾಗಿತ್ತು.  

promotions

 ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ  ಶಿವಾಜಿ ಕೆ ಬಿರ್ಜೆ  ಸಿದ್ದೇಶ್ವರ ಹೈಸ್ಕೂಲ್ ಕಣಬುರಗಿ ಹೆಡ್ ಮಾಸ್ಟರ್  ಆಗಮಿಸಿದರು . ಮತ್ತೋರ್ವ   ಉದ್ಘಾಟಕರಾಗಿ ಅಶೋಕ ತ ಭದ್ರಶೆಟ್ಟಿ ಕೆಎಸ್ಎಸ್ಆರ್ಡಿ ಹೈಸ್ಕೂಲ್  ಹೆಡ್ ಮಾಸ್ಟರ್ ಆಗಮಿಸಿದರು.
 ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ  ಡಾ ವಿನಾಯಕ್ ಕೋಪರ್ಡೇ  ಶಾಲಾ ಮಕ್ಕಳು ಎದುರಿಸುವ   ಮಾನಸಿಕ ಕಾಯಿಲೆಗಳಾದ  ಕಲಿಕಾ ಅಸ್ವಸ್ಥತೆ, ಖಿನ್ನತೆ , ಅತಿಚಂಚಲತೆ, ಕಲಿಕೆಯಲ್ಲಿ ಹಿಂದುಳಿವಿಕೆ , ಆತಂಕ ಭಯ , ಮಾನಸಿಕ ಕಾಯಿಲೆಗಳು  ಮತ್ತು ಚಿಕಿತ್ಸೆಯ ಮೂಲಗಳ ಬಗ್ಗೆ ತಿಳಿಸದರು ಮಕ್ಕಳ ಮಾನಸಿಕ ಆರೋಗ್ಯಕ್ಕೆ  ಯೋಗ ಧ್ಯಾನ ಕ್ರೀಡೆ  ಹಾಗೂ ಸಮತೋಲನ ಆಹಾರದ ಬಗ್ಗೆ  ಅರಿವು ಮೂಡಿಸಿದರು .

promotions

Read More Articles