ಸಿಎಂ ಬದಲಾವಣೆ ವಿಚಾರ; ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಹೆಬ್ಬಾಳಕರ
- shivaraj bandigi
- 28 Jun 2024 , 3:22 PM
- Belagavi
- 11480
ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಸಚಿವೆ ಲಕ್ಷ್ನೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿ, ಮಾತನಾಡಿ, ನಮ್ಮ ಪಕ್ಷದ ಎಲ್ಲಾ 136 ಶಾಸಕರ ಅಭಿಪ್ರಾಯ ತೆಗೆದುಕೊಂಡು ಸಿಎಂ ಮಾಡಿದ್ದಾರೆ. ಬೇರೆಯವರು ಏನು ಹೇಳಿದ್ದಾರೆ ಎನ್ನುವದಕ್ಕಿಂತ ನಮ್ಮ ಪಕ್ಷದ ಹೈಕಮಾಂಡ್ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವೆಲ್ಲ ಬದ್ದರಾಗಿದ್ದೇವೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಿ ಕೊಟ್ಟ ಮಾತಿನಂತೆ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಕಾಂಗ್ರೇಸ ಪಕ್ಷದ ಎರಡು ಕಣ್ಣುಗಳು ಇದ್ದಹಾಗೇ ಅಂತಹದರಲ್ಲಿ ಅವರು ಸಿಎಂ ಆಗಬೇಕು, ಇವರಾಗಬೇಕು ಎನ್ನುವುದು ಅಪ್ರಸ್ತುತವಾಗಿದೆ ಎಂದರು.

ಅಧಿಕಾರಕ್ಕೆ ಬರಲು ಡಿಕೆಶಿ ಪ್ರಮುಖ ಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಡಿಕೆಶಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಇಡೀ ರಾಜ್ಯದ ತುಂಬ ಓಡಾಡಿದ್ದಾರೆ. ಮಾಸ್ ಲೀಡರ್ ಸಿದ್ದರಾಮಯ್ಯ ಸಹ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದಾರೆ. ಕಾರ್ಯಕರ್ತರನ್ನು ಹುರುದುಂಬಿಸಿ ಎಲ್ಲರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ, ಎಷ್ಟೇ ಸಲ ಕೇಳಿದರು ನನ್ನ ನಿಲವು ಸ್ಪಷ್ಟ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದ್ದು, ಡಿಕೆಶಿ ಸಿಎಂ ಆಗೋದು ಬಿಡೋದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದ್ದಕ್ಕೆ,ರಾಜಕಾರಣ ನಿಂತ ನೀರಲ್ಲ,ಯುದ್ಧದಲ್ಲಿ ಸೋತು ಶಸ್ತ್ರಾಸ್ತ್ರ ತ್ಯಾಗ ಮಾಡಿದಾಗ ಅದು ಸೋಲಾಗುತ್ತದೆ. ರಾಜಕಾರಣದಲ್ಲಿ ಒಂದೇ ಸೋಲಿಗೆ ವಿಚಲಿತರಾಗಬಾರದು. ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕಾರ ಮಾಡಬೇಕು. ಕಳೆದ ವಿಧಾನ ಸಭೆ, ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ .ನನ್ನ ಮಗ ಈ ಲೋಕಸಭಾ ಚುನಾವಣೆಯಲ್ಲಿ ಸೋತ್ತಿದ್ದಾನೆ, ಅಲ್ಲಿಯೇ ಗೆಲ್ಲಬೇಕೆಂಬ ಛಲ ಅವನಲ್ಲಿದೆ, ಇದೊಂದು ಚುನಾವಣೆ ಸೋಲಿನಿಂದ ಕಂಗೆಡಬೇಕಿಲಲ್ಲ ಎಂದರು.
ಮೌನಕ್ಕೆ ಯಾಕೆ ಜಾರಿದಿವಿ ಅಂದ್ರೆ
ಎಲ್ಲಿಂದ ನಮ್ಮ ತಪ್ಪಾಗಿದೆ ಎನ್ನುವುದುದನ್ನು ಹುಡುಕುತ್ತಿದ್ದೇವೆ ಎಂದರು.










