ಬಿಜೆಪಿ ವಿರುದ್ಧ ಹರಿಹಾಯ್ದರ ಸಿಎಂ ಸಿದ್ದರಾಮಯ್ಯ
- shivaraj bandigi
- 15 Jan 2024 , 1:46 PM
- Belagavi
- 502
ಬೆಳಗಾವಿ :

ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿರೋಧ ಪಕ್ಷದವರ ಪ್ರಶ್ನೆಗಳಿಗೆ ಉತ್ತರಿಸಲು ಸರಕಾರ ಸಜ್ಜಾಗಿದೆ. ಯಾವ ವಿಷಯವನ್ನು ತಂದರು ಸಮರ್ಥವಾಗಿ ಉತ್ತರ ಕೊಡಲಾಗುವುದು ಎಂದರು.

ಇಂದಿನಿಂದ ಚಳಿಗಾಲದ ಅಧಿವೇಶದನ ಆರಂಭವಾಗಿದೆ.
ಕೆಲವು ಬಿಲ್‌ಗಳನ್ನು ಪಾಸ್ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ವಿಚಾರಕ್ಕೆ ಉತ್ತರಿಸಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ವರ್ಕೌಟ್ ಆಗದೇ ಅಲ್ಲಿ ನಾವು ಗೆದ್ವಾ ಎಂದು ಪ್ರಶ್ನಿಸಿದ ಅವರು, ಗ್ಯಾರಂಟಿ ಯೋಜನೆಗಳು ಎಲ್ಲ ಧರ್ಮದ, ಎಲ್ಲ ಜಾತಿಯ ಬಡವರ ಅನುಕೂಲಕ್ಕಾಗಿ ಮಾಡಿರೋ ಕಾರ್ಯಕ್ರಮ ಎಂದರು.
ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ನೇಮಿಸಲು ಆರು ತಿಂಗಳ ಸಮಯ ತೆಗೆದುಕೊಂಡರು.
ಅವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದರು.










