ಸಾರ್ವಜನಿಕ ಹಿತದೃಷ್ಟಿಯ ಎಲ್ಲ ಸೌಕರ್ಯಗಳನ್ನು ಒದಗಿಸಲು ಬದ್ಧ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ಮಂಡೊಳ್ಳಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಶ್ವಿನಿ ಸ. ತಳವಾರಕರ ಹಾಗೂ ಹಂಗರಗಾ ಗ್ರಾಮಸ್ಥರು  ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಗೃಹ ಕಚೇರಿಗೆ ಶನಿವಾರ ಸೌಹಾರ್ದಯುತ ಭೇಟಿ ನೀಡಿದರು. 

promotions

ಈ ಸಂದರ್ಭದಲ್ಲಿ ಅವರುತಮ್ಮ ಭಾಗಗಳಲ್ಲಿ ಆಗಿರುವ ಹಾಗೂ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಿ ಶಾಸಕರ ಗಮನ ಸೆಳೆದರಲ್ಲದೆ ಆತ್ಮೀಯವಾಗಿ ಸನ್ಮಾನಿಸಿದರು.

promotions

ಮಂಡೊಳ್ಳಿ, ಹಂಗರಗಾ ಸೇರಿದಂತೆ ಗ್ರಾಮಿಣ ಭಾಗಗಳಲ್ಲಿ ಯಾವುದೇ ಅಗತ್ಯಗಳಿದ್ದಲ್ಲಿ ಜನ ತಮ್ಮನ್ನು ಮುಕ್ತವಾಗಿ ಸಂಪರ್ಕಿಸಿ ಅದಕ್ಕೆ ಪರಿಹಾರ ಪಡೆಯಬಹುದು. ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ತಾವು ಆದ್ಯತೆ ಮೇರೆಗೆ ಒದಗಿಸಲು ಬದ್ಧರಿರುವುದಾಗಿ ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು. 

ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಲಕ್ಷ್ಮೀ ಲ ಕಣಬರಕರ, ಸುವರ್ಣ ಶಿ. ಹೊಸಕೋಟಿ, ನಾರಾಯಣ ಶಿಂಧೆ, ಲಕ್ಷ್ಮೀ ಸುತಾರ, ಮೀನಾ ಬಾ. ಗೋಡ್ಸೆ, ಗೋಪಾಲ ಗೋಡ್ಸೆ, ಬಾಳು ಪಾಟೀಲ, ಸುಭಾಷ್ ತಳವಾರ, ಯಲ್ಲಪ್ಪ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Read More Articles