ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ಬುಡಾ ವಿರುದ್ಧ ಲೋಕಾಯುಕ್ತಕ್ಕೆ ದೂರು : ಟೋಪಣ್ಣವರ

ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆಯ ವಿರುದ್ಧ ಲೋಕಾಯುಕ್ತದ ಮೊರೆ ಹೋಗಲಾಗಿದೆ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಹೇಳಿದರು.

promotions

ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

promotions

ಕಳೆದ ಮಾ. 16,17 ರಂದು ಬುಡಾದಿಂದ ಆನ್ ಲೈನ್ ಆಕ್ಷನ್ ಮಾಡಿದರು. ಮಾ.18 ರಂದು ಬುಡಾದವರು ಹೋಳಿ ಹಬ್ಬದ ದಿನ ಮ್ಯಾನ್ಯೂವಲ್ ಆಕ್ಷನ್ ಮಾಡಿ ನಿವೇಶನ ಹಂಚಿಕೆ ಮಾಡಿರುವ ಕುರಿತು ಅಂದಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವು. ಆದರೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು ನೂರಾರು ಕೋಟಿ ರೂ. ಅವ್ಯವಹಾರವಾಗಿದೆ. ಈ ಕುರಿತು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದರು.

ಕರ್ನಾಟಕ‌ ಸರಕಾರದ‌ ಎಲ್ಲಾ ಇಲಾಖೆಯಲ್ಲಿ ಯಾರೂ ಮ್ಯಾನ್ಯೂವಲ್ ಆಕ್ಷನ್ ಮಾಡುವುದಿಲ್ಲ. ಎಲ್ಲರೂ ಆನ್ ಲೈನ್ ಆಕ್ಷನ್ ಗೆ ಒತ್ತು ಕೊಡುತ್ತಾರೆ. ಎಲ್ಲ‌ ಕಡೆ ಮ್ಯಾನ್ಯೂವಲ್ ಆಕ್ಷನ್ ನಲ್ಲಿ ವಂಚನೆ ಮಾಡಲು ಅವಕಾಶ ಇರುತ್ತದೆ. ಆದರೆ ಬುಡಾದವರು ಮ್ಯಾನ್ಯುವಲ್ ಆಕ್ಷನ್ ಮಾಡಿರುವುದು, ಕಾರ್ನರ್ ನಿವೇಶ ಮತ್ತು ಬೆಲೆ, ಬಾಳುವ ನಿವೇಶನಗಳನ್ನು ಕಡಿಮೆ ದರದಲ್ಲಿ ಮಾರಾಟವಾಗಿದೆ ಎಂದರು.

ಬುಡಾದವರು ಆನ್ ಲೈನ್ ಆಕ್ಷನ್ ಮೂಲಕ ಬೇರೆ ಬೇರೆ ನಿವೇಶನಕ್ಕೆ ಒಂದ ದರದಲ್ಲಿ ಹಂಚಿಕೆ ಮಾಡಿದ್ದಾರೆ. ಹರಾಜು ಮಾಡುವ ವೇಳೆ ಬುಡಾದಿಂದ ಅಂದಾಜು‌18,00 ರೂ. ಚದರ ಅಡಿಯಲ್ಲಿ ದರ ನಿಗದಿ ಇದೆ. ಹರಾಜು ಆಗಿದ್ದು 5,150 ರೂ.ಗೆ ಹಂಚಿಕೆ ಮಾಡಿದ್ದಾರೆ. ಆದರೆ ಮ್ಯಾನ್ ವೆಲ್ ಆಕ್ಷನ್ ‌ನಲ್ಲಿ‌ ಕಾರ್ನರ್ ನಿವೇಶ‌ನ ಹಾಗೂ ಬೆಲೆ ಬಾಳುವ ನಿವೇಶನಗಳಿಗೆ ಬುಡಾದಿಂದ ಅಂದಾಜು‌1,400 ರೂ. ಚದರ ಅಡಿಯಲ್ಲಿ ದರ ನಿಗದಿ ಪಡಿಸಿತ್ತು. ಆದರೆ ಮಾರಾಟವಾಗಿದ್ದು‌1450 ರೂ.ಗೆ. ಆನ್ ಲೈನ್ ಆಕ್ಷನ್ ನಲ್ಲಿ ಒಳಗಿನ‌ ನಿವೇಶನದಲ್ಲಿ ಸಾವಿರಾರು ಪರ್ ಸ್ವೆರ್ ಫೀಟ್ ಗೆ ಲಾಭವಾಗಿದೆ. ಆದರೆ ಮ್ಯಾನವಲ್ ಆಕ್ಷನ್ ನಲ್ಲಿ ಕೇವಲ 50 ರಿಂದ 100 ರೂ. ಸ್ಕ್ವೇರ್ ಫಿಟ್ ನಲ್ಲಿ ಲಾಭವಾಗಿದೆ ಇದು ನಾನಾ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ಮ್ಯಾನವಲ್ ಆಕ್ಷನ್ ನಲ್ಲಿ ಯಾವುದೇ ಒಂದು‌ ನಿವೇಶನ ಹರಾಜು ವೇಳೆ ಸುಮಾರು ಇಬ್ಬರು ಜನ‌ ಇರಬೇಕು. ಪೈಪೋಟಿ ‌ಇಲ್ಲದೆ ನಿವೇಶನ ಹರಾಜು ಮಾಡದೆ ಒಬ್ಬರಿಗೆ ಹಂಚಿಕೆ‌‌ ಮಾಡಿದ್ದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದ ಅವರು, ಮ್ಯಾನವಲ್ ಆಕ್ಷನ್ ರದ್ದು ಮಾಡುವ ಬದಲು ನಿವೇಶನವನ್ನು ನೇರವಾಗಿ ಹಂಚಿಕೆ‌‌ ಮಾಡುವ ಆದೇಶ ಮಾಡಿದ್ದಾರೆ. ಸರಕಾರ ಇದರ‌ ತನಿಖೆಯನ್ನು‌ ನಡೆಸಬೇಕೆಂದು ಒತ್ತಾಯಿಸಿದರು.

ಸರಕಾರ ಪ್ರಾಧಿಕಾರದ ನಿವೇಶನಗಳನ್ನು ಮಾರಾಟ ಮಾಡುವಾಗ ಖರೀದಿದಾರರಲ್ಲಿ ಪೈಪೋಟಿ ‌ನಡೆದು ಹೆಚ್ಚಿನ ‌ದರ ಬರುವ ಉದ್ದೇಶದಿಂದ‌ ಬಹಿರಂಗ ಹರಾಜು ಮೂಲಕ‌ ನಿವೇಶನವನ್ನು ಮಾರಾಟ‌ ಮಾಡುತ್ತದೆ. ಆದರೆ ಬುಡಾದವರು ಆನ್ ಲೈನ್ ಹರಾಜು ಪ್ರಕ್ರಿಯೆ ನಡೆಸದೆ ವಂಚನೆ‌ ಮಾಡುವ ಉದ್ದೇಶ ದಿಂದ ಮ್ಯಾನ್ಯೂವಲ್ ಹರಾಜನ್ನು ಕರೆದು ಈ ಹರಾಜಿನಲ್ಲಿ ಒಂದರಿಂದ ಇಬ್ಬರು ಮಾತ್ರ ಭಾಗವಹಿಸುವಂತೆ ಮಾಡಿ ಸರಕಾರ‌ ನಿಗದಿಪಡಿಸಿದ ದರಕ್ಕಿಂತ ಕೇವಲ 50 ರಿಂದ 60 ರೂ. ಹೆಚ್ಚು ಮಾಡಿ ಹರಾಜು ಪ್ರಕ್ರಿಯೆಯನ್ನು ಮುಗಿಸಿರುತ್ತಾರೆ. ಈ ಹರಾಜಿನಲ್ಲಿ ಹೆಚ್ವಿನ ಜನ ಭಾಗವಹಿಸಿಲ್ಲ. ದರದಲ್ಲಿ ಪೈಪೋಟಿಯೂ ನಡೆದಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಹರಾಜು ಪ್ರಕ್ರಿಯೆಯನ್ನು ಮಾಡಿ ಸರಕಾರಕ್ಕೆ‌ ಕೋಟ್ಯಂತರ ರೂ. ಪಂಗನಾಮ ಹಾಕಿದ್ದಾರೆ ಎಂದು ಟೋಪಣ್ಣವರ ಆರೋಪಿಸಿದ್ದಾರೆ.

ಕಡಿಮೆ ಹಣಕ್ಕೆ ಮಾರಾಟ ಮಾಡಿರುವುದು ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಬುಡಾದವರು ಜವಾಬ್ದಾರಿಯಿಂದ ಬಡಜನರಿಗೆ ನಿವೇಶನ ಹಂಚಿಕೆ‌ ಮಾಡಬೇಕಿತ್ತು. ಆದರೆ ಬುಡಾದಲ್ಲಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಭ್ರಷ್ಟಾಚಾರದ ಅಡಿಯಲ್ಲಿ ದೂರು ನೀಡಲಾಗಿದೆ ಮುಂಬರುವ ದಿನಗಳಲ್ಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದರು.

ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles