ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ, ಬಿಜೆಪಿಯಿಂದ ಪ್ರತಿಭಟನೆ
- shivaraj bandigi
- 20 Jun 2024 , 2:36 PM
- Bailhongal
- 6911
ಬೈಲಹೊಂಗಲ : ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ, ಬೈಲಹೊಂಗಲ ಮಂಡಲ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪುರಸಭೆ ಸದಸ್ಯರಾದ ಗುರು ಮೆಟಗುಡ್ಡ, ಶಿವಾನಂದ ಕೋಲಕಾರ ಹಾಗೂ ಸಾಗರ ಭಾವಿಮನಿ ಮಾತನಾಡಿ, ರಾಜ್ಯ ಸರಕಾರ ತನ್ನ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆಯ ನೀತಿಯನ್ನು ಅನುಸರಿಸಿ ಅದರ ಹೊರೆಯನ್ನು ರಾಜ್ಯದ ಜನರ ಮೆಲೆ ಹಾಕುತ್ತಿದೆ. ಇದರಿಂದ ಇಡೀ ಕರ್ನಾಟಕದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಸರ್ಕಾರ ಸರ್ವಾಧಿಕಾರಿ ನಿರ್ಧಾರದ ಧೋರಣೆಯನ್ನು ಹೊಂದಿದೆ. ಕುಡಿಯುವ ನೀರಿಗೆ ಹಾಹಾಕರ, ರೈತರ ಬದುಕು ಹೇಳತೀರದಾಗಿದೆ. ಈ ಸರ್ಕಾರ ಬಂದಮೇಲೆ ಒಂದೇ ಒಂದು ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವ ಆಡುತ್ತಿದ್ದು.ಇದರ ಬೆನ್ನಲ್ಲೆ ಇದೀಗ ಡೀಸೇಲ್ ಪೆಟ್ರೋಲ ದರವನ್ನು ಹೆಚ್ಚಿಸಿ ಕಳೆದ ಲೋಕಸಭಾ ಚುನಾವಣೆಯ ಫಲತಾಂಶದ ಸೇಡನ್ನು ಜನತೆಯ ಮೆಲೆ ತೀರಿಸಿಕೊಳ್ಳಲು ಹೋರಟಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆಯು ಕೇವಲ ಸವಾರರಿಗೆ ಮಾತ್ರ ಹೊರೆಯಾಗದೆ ಸರಕು ಸಾಗಾಣಿಕೆಯ ಮೇಲೆ ಪರಿಣಾಮ ಬೀಳಲಿದೆ. ಪ್ರಯಾಣದ ದರವನ್ನು ಹೆಚ್ಚಸಲಿದೆ ಎಂದರು.
ಅಷ್ಟೇ ಅಲ್ಲದೆ ತರಕಾರಿಗಳ ಬೆಲೆ, ದಿನನಿತ್ಯ ಗೃಹಬಳಕೆಯ ವಸ್ತುಗಳ ಬೆಲೆ, ದವಸ ದಾನ್ಯಗಳ ಬೆಲೆ, ಕಟ್ಟಡ ಸಾಮಗ್ರಿಗಳ ಬೆಲೆ ಕೂಡ ಹೆಚ್ಚಾಗಿವೆ. ಈ ರಾಜ್ಯದ ಜನತೆಗೆ ನೆಮ್ಮದಿಯ ಬದುಕು ನೀಡಲು ಸಾಧ್ಯವಾಗಿದ್ದರೆ ಈ ಸರಕಾರ ಅಧಿಕಾರ ಬಿಟ್ಟು ತೊಲಗಲಿ ಎಂದರು.
ಹಿರಿಯ ರೈತ ಮುಖಂಡ ನಿಂಗಪ್ಪ ಚೌಡಣ್ಣವರ ಮಾತನಾಡಿ, ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ನಾವು ಸರ್ಕಾರವನ್ನು ನಡೆಸುತ್ತೇವೆ ಎಂದು ಹೊರಟಿರುವ ಕಾಂಗ್ರೆಸಿಗರು ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ನೋಡಿ ಭಾರತೀಯ ಜನತಾ ಪಾರ್ಟಿಯನ್ನು ಕೈಕಟ್ಟಿ ಕೂರಲು ಸಾಧ್ಯವಿಲ್ಲಾ. ನಿಮ್ಮ ರೈತ ವಿರೋಧಿ, ಜನ ವಿರೋಧಿ, ಬಡವರ ವಿರೋಧಿ, ದಲಿತರ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ ಹಾಗೂ ಮಧ್ಯಮ ವರ್ಗಗಳ ವಿರೋಧಿ ಆಡಳಿತ ಕೊನೆಯಾಗುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರ ಗುರುಪಾದ ಕಳ್ಳಿ, ಗುರಪ್ಪ ಮೆಟಗುಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಗದೀಶ್ ಬೂದಿಹಾಳ, ಸಚಿನ ಕಡಿ, ಶ್ರೀನಿವಾಸ್ ಬರಮಣ್ಣವರ್, ಮಂಜು ಮರಶೆಟ್ಟಿ, ಜ ಸಂತೋಷ್ ಹಡಪದ,,ಮಂಡಲ ಉಪಾಧ್ಯಕ್ಷ ಸುಭಾಷ ತುರುಮರಿ, ರಾಘು ಕುಮುಚಿ, ಸದಾಶಿವಗೌಡ ಪಾಟೀಲ, ಚೆನ್ನಪ್ಪ ಹೊಸೂರ, ಮಹಾಂತೇಶ್ ಅಕ್ಕಿ, ರವಿ ಹೊಸೂರ್, ರವಿ ತುರುಮರಿ ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
ವರದಿ : ರವಿಕಿರಣ್ ಯಾತಗೇರಿ










