ಬೆಳಗಾವಿಯಲ್ಲಿ ಮೂರು ಸಿಎಂ ಗಳ ಸಂಗಮ, ಮಹಾದಾಯಿ ಕುರಿತು ಚರ್ಚೆ ಮಾಡಲಿ- ರಾಜೀವ ಟೋಪಣ್ಣವರ

ಬೆಳಗಾವಿ :ಗೋವಾ,ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳು ನಾಳೆ ಶನಿವಾರ ಬೆಳಗಾವಿಯಲ್ಲಿ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದು ಮೂರು ರಾಜ್ಯಗಳ ನಿರ್ಣಾಯಕರು ಮಹಾದಾಯಿ ಮತ್ತು ಕಳಸಾ ಬಂಡೂರಿ ಕುರಿತು ಶುಭ ಸಮಾಚಾರ ನೀಡಲಿ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಆಶಯ ವ್ಯಕ್ತಪಡಿಸಿದ್ದಾರೆ.

promotions

ಉತ್ತರ ಕರ್ನಾಟಕದ ಧೀಮಂತ ನಾಯಕ ಡಾ. ಪ್ರಭಾಕರ ಕೋರೆ ಅವರ ಜನ್ಮ. ದಿನದ ಅಮೃತ ಮಹೋತ್ಸವದ ಕಾರ್ಯಕ್ರಮದ ಶುಭ ಘಳಿಗೆ ಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿ ಒಂದೇ ವೇದಿಕೆ ಹಂಚಿಕೊಳ್ಳುವ ಶುಭ ಸಂಧರ್ಭದಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮದ ಸಮಾರೋಪದ ಬಳಿಕ,ಗೋವಾ,ಕರ್ನಾಟಕ,ಮತ್ತು ಮಹಾರಾಷ್ಟ್ರದ ನಿರ್ಣಾಯಕರು,ಸೌಹಾರ್ದ ಸಭೆ ನಡೆಸಿ, ಮಹಾದಾಯಿ ಮತ್ತು ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಎದುರಾಗಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚೆ ಮಾಡಬೇಕೆಂದು ಆಮ್ ಆದ್ಮಿ ಮುಖಂಡ,ರಾಜೀವ ಟೋಪಣ್ಣವರ ಮನವಿ ಮಾಡಿಕೊಂಡಿದ್ದಾರೆ. 

promotions

ಡಾ.ಪ್ರಭಾಕರ ಕೋರೆ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಕಳಕಳಿ ಹೊಂದಿರುವ ನಾಯಕರಾಗಿದ್ದು,ಅವರ ಜನ್ಮ ದಿನದ ಅಮೃತ ಮಹೋತ್ಸವದ ದಿನ ಉತ್ತರ ಕರ್ನಾಟಕದ ಪಾಲಿಗೆ ಐತಿಹಾಸಿಕ ದಿನವಾಗಲಿ ಈ ದಿನ ಉತ್ತರ ಕರ್ನಾಟಕದ ಮಹತ್ವದ ಯೋಜನೆಗಳಾದ ಮಹಾದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಸಂಕಷ್ಟಗಳು ನಿವಾರಣೆಯಾಗಲಿ ಎಂದು ರಾಜೀವ ಟೋಪಣ್ಣವರ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಮೂರು ರಾಜ್ಯಗಳ ಮುಖ್ಯಮಂತ್ರಿ ಗಳು ಬಿಜೆಪಿ ಪಕ್ಷದವರೇ ಆಗಿದ್ದು ಅವರು ನಾಳೆ ಒಂದೇ ವೇದಿಕೆ ಹಂಚಿಕೊಳ್ಳುತ್ತಿದ್ದು,ಅಮೃತ ಮಹೋತ್ಸವದ ಕಾರ್ಯಕ್ರಮದ ಮುನ್ನ,ಅಥವಾ ಕಾರ್ಯಕ್ರಮ ಮುಗಿದ ಬಳಿಕ ಮೂರು ರಾಜ್ಯಗಳ ನಿರ್ಣಾಯಕರು ಸಭೆ ಸೇರಿ,ಉತ್ತರ ಕರ್ನಾಟಕದ ರೈತರಿಗೆ ಶುಭ ಸುದ್ದಿ ಕೊಡಲಿದ್ದಾರೆ ಎಂದು ರಾಜೀವ ಟೋಪಣ್ಣವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More Articles