75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಾರಂಜಿಮಠದ ಶ್ರೀಗಳಿಗೆ ಅಭಿನಂದನೆಗಳು
- shivaraj bandigi
- 8 Apr 2024 , 1:19 PM
- Belagavi
- 817
ಬೆಳಗಾವಿ :

ಇಲ್ಲಿನ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಅವರು 74 ವರ್ಷ ಪೂರೈಸಿ 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶ್ರೀಗಳಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಶುಭಾಶಯ ಕೋರಿದ್ದಾರೆ.

ಕಾರಂಜಿಮಠದ ಗುರುಸಿದ್ದ ಅಪ್ಪಗಳು ಎಂದರೆ ಎಲ್ಲಾ ಸಂಪ್ರದಾಯದ ಸ್ವಾಮಿಗಳ ನಡುವೆ ಸಮನ್ವಯದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ಭಕ್ತರಿಗೂ ಒಳ್ಳೆಯ ಮನಸ್ಸಿನಿಂದ ಆಶೀರ್ವದಿಸುತ್ತಿರುವ ಗುರುಸಿದ್ದ ಸ್ವಾಮೀಜಿ ಅವರು, ನಮಗೆಲ್ಲರಿಗೂ ಆದರಣೀಯರು. ಇವರು ಗುರುಗಳಾಗಿರುವ ಮಹಾಪ್ರಸಾದಿ, ಶತಾಯುಷಿ ಶ್ರೀ. ಶಿವಬಸವ ಸ್ವಾಮೀಜಿ ಅವರು ನಾಗನೂರು ರುದ್ರಾಕ್ಷಿಮಠ ಇವರಂತೆ ಶತಾಯುಷಿಯಾಗಲಿ ಎಂದು ಪ್ರಾಥಿಸುತ್ತೇವೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.










