ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ: ಪಟಾಕಿ ಸಿಡಿಸಿ ಸಂಭ್ರಮಾಚರಣೆ
- Krishna Shinde
- 15 Jan 2024 , 1:41 AM
- Bidar
- 147
ಔರಾದ: ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಔರಾದ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವರಾಜ್ ದೇಶಮುಖ, ರಾಮಣ್ಣ ವಡೆಯರ,ಡಾ ಫಯಾಜ್ ,ಬಾಬುರಾವ ತಾರೆ,ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಸಹ ಸಂಚಾಲಕರಾದ ಸುಧಾಕರ ಕೊಳ್ಳುರ ,ಯುವ ನಾಯಕ ಡಾ ಮಹೇಶ ಪುಲಾರಿ,ಅಂಜಾರಡ್ಡಿ,ವಜಿನಾಥ ವಡಿಯಾರ,ಪ್ರದೀಪ ,ರಹಿಮ ಮೊಲಿಸಾಬ, ಶಾವನ ಗುರೂಜಿ, ಮುಂತಾದವರು ಉಪಸ್ಥಿತರಿದ್ದರು.











