ಕಾಂಗ್ರೆಸ್ ಗೆಲುವು ಮುಖಂಡರ ಸಂಭ್ರಮ
- Krishna Shinde
- 12 Jan 2024 , 4:16 AM
- Raichur
- 203
ಸಿಂದಗಿ : ವಿಧಾನಸಭಾ ಮತಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಅಶೋಕ ಮನಗೂಳಿ ಅವರ ಗೆಲುವಿಗೆ ವಿಜಯೋತ್ಸವ ತಾಲೂಕಿನ ಗೋಲಗೇರಿ ಗ್ರಾಮದ ದೈವ ಸ್ವರೂಪಿ ಹುಸೇನ್ ಬಾಷಾ ದರ್ಗಾ ದಲ್ಲಿ ಕಾಂಗ್ರೆಸ್ ಮುಖಂಡರಾದ ವಿಜುಗೌಡ ಪಾಟೀಲ್ ಪ್ರಕಾಶ್ ತಳವಾರ್ ನಿಂಗನಗೌಡ ಬಿರಾದಾರ್ ನಬಿ ಡವಳಾರ್ ಶ್ರೀಶೈಲ್ ಜಲವಾದಿ, ಮೈಬೂಬ್ ದೊಡಮನಿ ಪಕ್ಷದ ಅಭಿಮಾನಿಗಳು ಹಿತೈಷಿಗಳು ಪಕ್ಷದ ಕಾರ್ಯಕರ್ತರುಎಲ್ಲರೂ ಒಳಗೊಂಡು ಅದ್ದೂರಿಯಾಗಿ ವಿಜಯೋತ್ಸವ ಆಚರಿಸಲಾಯತು.

ಈ ಸಂದರ್ಭದಲ್ಲಿ ಪ್ರಕಾಶ್ ತಳವಾರ ಅವರು ಸಿಂದಗಿ ತಾಲೂಕಿನ ಅಭಿವೃದ್ಧಿಗೋಸ್ಕರ ಹಗಲಿರುವ ಶ್ರಮಿಸಿ ಹಾಗೆ ಜನರ ಮೂಲಭೂತ ಸೌಕರ್ಯಗಳು ಜನರ ಬಾಗಿಲಿಗೆ ಮುಟ್ಟುವಂತೆ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.











