ಕಾಂಗ್ರೆಸ್ ನಾಯಕರಿಗೆ ಆಮ್ ಆದ್ಮಿ ಪಕ್ಷದ ಭೀತಿ-ರಾಜೀವ ಟೋಪಣ್ಣವರ

ಬೆಳಗಾವಿ : ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಸಂಘಟನಾತ್ಮಕ ವಾಗಿ ಹಳ್ಳಿ ಹಳ್ಳಿಗಳಲ್ಲಿ ಬೆಳೆಯುತ್ತಿದೆ. ರಾಜ್ಯದ ಕಾಂಗ್ರೆಸ್ ನಾಯಕರಿಗೆ ಆಮ್ ಆದ್ಮಿ ಪಕ್ಷದ ಭೀತಿ ಎದಿರಾಗಿದ್ದು, ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ನಕಲು ಮಾಡುತ್ತಿದೆ ಎಂದು ಆಪ್ ಮುಖಂಡ ರಾಜೀವ ಟೋಪಣ್ಣವರ ಆರೋಪಿಸಿದ್ದಾರೆ. 

promotions

ಆಮ್ ಆದ್ಮಿ ಪಕ್ಷ ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಅನೇಕ ಕಠಿಣ ಕ್ರಮಗಳನ್ನು ಜರುಗಿಸಿದೆ. ಜನಪರವಾದ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದು ಡಿಕೆ ಶಿವಕುಮಾರ್ ಮತ್ತು ಸಿದ್ರಾಮಯ್ಯನವರು ಆಮ್ ಆದ್ಮಿಯ ಪೊರಕೆ ಹಿಡಿದು ಕಸಗೂಡಿಸಿ ಬ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ ಎನ್ನುವ ಸಂದೇಶ ನೀಡಿದ್ದು ಹಾಸ್ಯಾಸ್ಪದವಾಗಿದೆ ಎಂದು ಟೋಪಣ್ಣವರ ಲೇವಡಿ ಮಾಡಿದ್ದಾರೆ. 

promotions

ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಜಾಬ್ ನಲ್ಲಿ ಬಡ ಕುಟುಂಬಗಳಿಗೆ,300 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಕೊಡುತ್ತಿದೆ.ಕರ್ನಾಟಕದ ಕಾಂಗ್ರೆಸ್ ನಾಯಕರು  ಪ್ರತಿ ಬಡಕುಟುಂಬಕ್ಕೆ 200 ಯುನಿಟ್ ವಿದ್ಯತ್ ನೀಡುವದಾಗಿ ಪ್ರಚಾರ ಮಾಡುವ ಮೂಲಕ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ನಕಲು ಮಾಡುತ್ತಿದೆ. ಎಂದು ಟೋಪಣ್ಣವರ ಆರೋಪಿಸಿದ್ದಾರೆ. 

ಕರ್ನಾಟಕದ ಕಾಂಗ್ರೆಸ್ ನಾಯಕರ ಹತ್ತಿರ ಹೊಸ ಯೋಜನೆಗಳಿಲ್ಲ,ಬಡವರ ಉದ್ಧಾರಕ್ಕಾಗಿ ಹೊಸ ಆಲೋಚನೆಗಳಿಲ್ಲ,ಆಮ್ ಆದ್ಮಿ ಪಕ್ಷದ ಪೊರಕೆ ಹಿಡಿದು,ಆಪ್ ಪಕ್ಷದ ಯೋಜನೆಗಳನ್ನೇ ಮುಂದಿಟ್ಟುಕೊಂಡು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು ರಾಜ್ಯದ ಜನ ಕಾಂಗ್ರೆಸ್ಸಿನ ನಕಲು ಮನಸ್ಥಿತಿಗೆ ಸೊಪ್ಪು ಹಾಕುವದಿಲ್ಲ ಎಂದು ರಾಜೀವ ಟೋಪಣ್ಣವರ ಹೇಳಿದ್ದಾರೆ. 

ಬೆಳಗಾವಿಯ ವೀರಸೌಧ ಮಹಾತ್ಮಾ ಗಾಂಧೀಜಿಯವರು ಅಧಿವೇಶನ ನಡೆಸಿದ ಐತಿಹಾಸಿಕ ಸ್ಥಳ,ಈ ಐತಿಹಾಸಿಕ ಸ್ಥಳದಿಂದ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ನೀಡಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಜಿಯವರ ವೀರಸೌಧ ಕಟ್ಟಡಕ್ಕೆ ಸುಣ್ಣಬಣ್ಣ ಹಚ್ಚದೇ ಐತಿಹಾಸಿಕ ಕಟ್ಟಡಕ್ಕೆ ಅವಮಾನ ಮಾಡಿದೆ ಎಂದು ಟೋಪಣ್ಣವರ ಕಿಡಿಕಾರಿದ್ದಾರೆ.
 

Read More Articles