ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ: ಸತೀಶ
- 14 Jan 2024 , 11:46 PM
- Belagavi
- 176
ಬೆಳಗಾವಿ :ರಾಜ್ಯ ಬಿಜೆಪಿ ನಾಯಕರುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಅದು ಕರ್ನಾಟಕದ ಚುನಾವಣೆಯ ಮೇಲೆ ಪರಿಣಾಮ ಬಿರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ ಪ್ರಜಾ ಧ್ವನಿಯ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಬಿಜೆಪಿ ಮಾಡಿರುವ ಸಾಲವನ್ನು ಕಾಂಗ್ರೆಸ್ ಮನ್ನಾ ಮಾಡಿದೆ. ಮುಂಬರುವ ದಿನಗಳಲ್ಲಿ ಒಂದು ಕೋಟಿ ಇಪ್ಪತೈದು ಲಕ್ಷ ಮನೆಗೆ ವಿದ್ಯುತ್ ಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರದಿಂದ ಬರುವ 35 ಕೋಟಿ ರೂ. ಅನುದಾನ ಕೇಳುವ ಬಿಜೆಪಿಯವರಿಗೆ ದೈರ್ಯ ಇಲ್ಲ. ಅವರು ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಮಿಕ್ಸರ್ ಹಂಚಿಕೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಘೋಷಣೆ ಮಾಡಿದ ಮೇಲೆ ಚುನಾವಣಾ ಆಯೋಗ ನಿಯಂತ್ರಣ ಮಾಡಬಹುದು. ಆದರೆ ಸಂಜಯ ಪಾಟೀಲರು ಹೇಳಿದ್ದಾರಲ್ಲ. ಮತದಾರರ ಮೇಲೆ ಅದು ಅವಲಂಬಿತವಾಗಿರುತ್ತದೆ ಎಂದರು.










