ಬೆಳಗಾವಿಗೂ ಕಾಲಿಟ್ಟ ಸೌಜನ್ಯ ನ್ಯಾಯದ ಹೋರಾಟ
- Shivaraj Bandigi
- 15 Jan 2024 , 2:52 AM
- Belagavi
- 371
ಬೆಳಗಾವಿ : ಕರ್ನಾಟಕ ಪರಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಕರ್ನಾಟಕ ಭೀಮ ಸೇನೆ ಮತ್ತು ಕರ್ನಾಟಕ ಯುವ ವೇದಿಕೆ ಸಂಘಟನೆಗಳ ಸಂಯೊಗದಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಕುಮಾರಿ ಸೌಜನ್ಯಾಳಿಗೆ ನ್ಯಾಯ ಸಿಗಲೇಬೇಕು ಅವಳನ್ನು ಅತ್ಯಾಚಾರ ಎಸುಗಿ ಕೊಲೆಮಾಡಿದ ಆರೋಪಿಗಳನ್ನು ಬಂದಿಸಿ ಗಲ್ಲು ಶಿಕ್ಷೆ ನೀಡಬೇಕು ಆ ಹೆಣ್ಣು ಮಗಳ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಇವತ್ತು ಸಂಜೆ ಬೆಳಗಾವಿ ಬೋಗರ್ವೆಸ್ ನಿಂದ ಚನ್ನಮ್ಮ ವೃತ್ತದ ವರೆಗೆ ಪಂಜಿನ ಮೆರವಣಿಗೆ ಮೂಲಕ ಹೋರಾಟ ಮಾಡಲಾಯಿತು .

ಈ ಪ್ರಕರಣದಲ್ಲಿ ಬಾಗಿಯಾದ ವ್ಯಕ್ತಿಗಳನ್ನು ಮತ್ತು ಆರೋಪಿಗಳಿಗೆ ಹಿಂದೆ ನಿಂತು ರಕ್ಷಿಸುತ್ತಿರುವ ಯಾವುದೇ ದೊಡ್ಡ ಶಕ್ತಿ ವ್ಯಕ್ತಿ ಆಗಿರಲಿ ಇದರ ವಿರುದ್ಧ ತನಿಖೆ ಮಾಡಿಸಬೇಕು ಮತ್ತು ಅವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಪಂಜಿನ ಮೆರವಣಿಗೆ ಮೂಲಕ ಉಗ್ರವಾದ ಹೋರಾಟ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಪರಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷರು ಮಹೇಶ ಶಿಗೀಹಳ್ಳಿ, ಉಪಾಧ್ಯಕ್ಷ ಶಿವಾ ನಾಯಕ, ಕರ್ನಾಟಕ ಭೀಮ್ ಸೇನೆ ಜಿಲ್ಲಾ ಅಧ್ಯಕ್ಷ ಪ್ರವೀಣ್ ಮಾದರ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಮಲ್ಲಪ್ಪ ಅಕ್ಕಮಡ್ಡಿ, ವಿಜಯ
ಮತ್ತು ಕರ್ನಾಟಕ ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಶಿವು ದೇವರವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










