ಅಧಿವೇಶನದಲ್ಲಿ ದಕ್ಕೀತೆ ಉತ್ತರದ ಪ್ರಶ್ನೆ..!

ಬೆಳಗಾವಿ: ಬೆಳಗಾವಿಯ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕು. ಆದರೆ ಅಭಿವೃದ್ಧಿ ವಿಷಯಗಳು ಇಲ್ಲಿಯವರೆಗೂ ಚರ್ಚೆಯಾಗದೆ ಇರುವುದು ಈ ಭಾಗದ ಜನರಲ್ಲಿ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

promotions

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರು ಸರಕಾರದ ಮೇಲೆ ಸಾಕಷ್ಟು ನಿರೀಕ್ಷೆ‌ ಇಟ್ಟುಕೊಂಡಿರುತ್ತಾರೆ. ಈ ಹಿಂದೆ ನಡೆದ ಅಧಿವೇಶನಗಳಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಎಷ್ಟು‌‌ ದಿನ ಚರ್ಚೆ ನಡೆದಿವೆ. ಎಷ್ಟು ಪರಿಹಾರವಾಗಿದೆ ಎನ್ನುವುದು ಗೌಪ್ಯವಾಗಿ ಉಳಿದಿದೆ.

promotions

ಅಧಿವೇಶನದಲ್ಲಿ ಕೋಟ್ಯಂತರ ರೂಪಾಯಿ ಖರ್ಚು, ವೆಚ್ಚ, ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಲು ಈ ಭಾಗದ ಜನಪ್ರತಿನಿಧಿಗಳಿಗೆ ಆಸಕ್ತಿ ಇಲ್ಲದೆ ಇರುವುದು ಉತ್ತರ ಕರ್ನಾಟಕದ ಜನರ ಅಸಮಾಧಾನಕ್ಕೆ‌ ಕಾರಣವಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದಲ್ಲಿ ಯಾವುದಾದರೂ ಕೊಡುಗೆಗಳನ್ನು ಸರಕಾರ‌ ಘೋಷಣೆ ಮಾಡಬಹುದು ಎನ್ನುವ ನರೀಕ್ಷೆಯಲ್ಲಿ ಜನರಿರುತ್ತಾರೆ. ಆದರೆ 10 ದಿನಗಳ ಕಾಲ ನಡೆಯುವ ಕಲಾಪದಲ್ಲಿ ದಕ್ಷಿಣ ಕರ್ನಾಟಕದ ಸಮಸ್ಯೆಗಳೇ ಚರ್ಚೆಯಾಗುತ್ತವೆ ವಿನಃ ಈ ಭಾಗದ ಚರ್ಚೆ ನಡೆಯುವುದು ಕೇವಲ ಒಂದು ದಿನ ಅಥವಾ ಎರಡೂ ದಿನ. ಅದು ಕಾಟಾಚಾರಕ್ಕೆ ಎನ್ನುವ ಭಾಸ ಈ ಭಾಗದ ಜನರದ್ದಾಗಿದೆ.

ಸರಕಾರಕ್ಕೆ ಒತ್ತಾಯಿಸಬೇಕಿದ್ದ ವಿರೋಧ ಪಕ್ಷಗಳು ರಾಜಕೀಯ ಲಾಭದ ಲೆಕ್ಕಾಚಾರದ ಸಲುವಾಗಿ ಉತ್ತರ ಕರ್ನಾಟಕವನ್ನು ಶೂನ್ಯವಾಗಿಟ್ಟು ಉತ್ತರ ‌ಕರ್ನಾಟಕದ ಜನರ ದುರ್ಬಾಗ್ಯವೆ ಸರಿ.

Read More Articles