ಡ್ಯಾಮ್ ಖಾಲಿ ಖಾಲಿ ,ನೀರನ್ನು ಮಿತವಾಗಿ ಬಳಸಿ ಹುಷಾರ್
- Krishna Shinde
- 15 Jan 2024 , 1:21 AM
- Belagavi
- 312
ಬೆಳಗಾವಿ : ಮಳೆನಾಡು ಎಂದೆ ಪ್ರಖ್ಯಾತಿ ಪಡೆದಿರುವ ಬೆಳಗಾವಿಯಲ್ಲಿ ಜೂನ್ ಬಂತು ಅಂದ್ರೆ ಸಾಕು ಅತಿಯಾದ ಮಳೆಯಿಂದ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗುತಿತ್ತು ಮತ್ತು ಅತಿಯಾದ ಮಳೆಯಿಂದ ಜನರು ಬೇಸತ್ತು ಹೋಗುತಿದ್ದ ಉಧಾರಣೆ ಕೂಡಾ ಉಂಟು.

ಆದರೆ ಈ ವರ್ಷ ಜೂನ್ ತಿಂಗಳು ಕಳೆಯಲು ಬಂದರು ಮಳೆಯಾಗದೆ ಅತಿಯಾದ ಬಿಸಿಲಿನ ಬೇಗೆಯಿಂದ ಬೆಳಗಾವಿ ಜನತೆಗೆ ಶಾಕ್ ಕೊಟ್ಟಂತಾಗಿದೆ.

ಬೆಳಗಾವಿ ಜನತೆಗೆ ನೀರು ಪೂರೈಕೆ ಮಾಡುವ ಹಿಡಕಲ್ ಡ್ಯಾಮ್ ಮತ್ತು ರಕ್ಕಸಕೊಪ್ಪ ಕೂಡಾ ಬತ್ತಿ ಹೋಗುವ ಪರಿಸ್ಥಿತಿ ಬಂದಿದ್ದು ನೀರಿಗಾಗಿ ಆಹಾಕಾರ ನಡೆಯುವ ಸಂಭವವಿದೆ ಎಂದು ಎದ್ದು ಕಾಣುತ್ತಿದೆ.
ಇನ್ನಾದರೂ ಮಳೆರಾಯ ಬೆಳಗಾವಿ ಜನತೆಯ ಮೇಲೆ ಕೃಪೆ ತೋರಿಸಿ ಬಿಸಿಲಿನ ಬೇಗೆಯಿಂದ ಮುಕ್ತಿ ನೀಡುವಂತೆ ಬೆಳಗಾವಿ ಜನತೆ ಮಳೆರಾಯನಲ್ಲಿ ಮೊರೆ ಹೋಗಿದ್ದಾರೆ.
ಬೆಳಗಾವಿ ನಗರಕ್ಕೆ ಕುಡಿಯುವ ನೀರನ್ನು ಹಿಡಕಲ್ ಹಾಗೂ ರಕ್ಕಸಕೊಪ್ಪ ಜಲಾಶಯದಿಂದ ಸರಬರಾಜು ಮಾಡುತ್ತಿದ್ದು, ಮಳೆಯ ಅಭಾವದಿಂದ ಕಳೆದ ವರ್ಷಕ್ಕಿಂತ ಪ್ರಸ್ತುತ ವರ್ಷ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ಸಾರ್ವಜನಿಕರು ದಿನಪ್ರತಿ ಬಳಸಲಾಗುತ್ತಿರುವ ನೀರಿನ ಬಳಕೆಯ ಪ್ರಮಾಣವನ್ನು ತಕ್ಷಣದಿಂದಲೇ ಮಿತವಾಗಿ ಬಳಸುವುದು, ಪಂಪ್‌ಸೆಟ್‌ನ್ನು ಬಳಸಬಾರದು ಹಾಗೂ ಕಾಯಿಸಿ ಆರಿಸಿದ ನೀರನ್ನು ಕುಡಿಯಲು ಬಳಸುವುದು ಒಳಿತು.
ಒಂದು ವೇಳೆ ಮುಂಬರುವ ದಿನಗಳಲ್ಲಿ ಮಳೆಯಾಗದೇ ಇದ್ದಲ್ಲಿ, ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವುದರಲ್ಲಿ ಪ್ರಸಕ್ತ ದಿನಗಳಿಗಿಂತ ಗಂಭೀರ ಪರಿಸ್ಥಿತಿ ಉಂಟಾಗಬಹುದು ಕಾರಣ ಬೆಳಗಾವಿ ಜನತೆ ನೀರನ್ನು ಅತ್ಯಂತ ಮಿತವಾಗಿ ಬಳಸಿ ನೀರನ್ನು ಅನಾವ್ಯಶಕ ವ್ಯಯ ಮಾಡದಿರಲು ಈ ಸುದ್ದಿಯ ಮೂಲಕ ಕೋರಲಾಗಿದೆ.










